ಶಿಕ್ಷಣ

ಅಪ್ರಾಪ್ತ ವಿದ್ಯಾರ್ಥಿ ಜೊತೆ ಕ್ಲಾಸ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆ: ಶಿಕ್ಷಕಿ ಬಂಧನ

Views: 190

ಕನ್ನಡ ಕರಾವಳಿ ಸುದ್ದಿ:ಅಪ್ರಾಪ್ತ ವಿದ್ಯಾರ್ಥಿ ಜೊತೆ ಕ್ಲಾಸ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆ ನಡೆಸಿದ ಆರೋಪದಲ್ಲಿ ಫ್ಲೋರಿಡಾದ ರಿವರ್‌ವ್ಯೂ ಪ್ರೌಢಶಾಲಾ ಶಿಕ್ಷಕಿಯನ್ನು ಬಂಧಿಸಿದ ಘಟನೆ ನ್ಯೂಯಾರ್ಕ್‌ ನಲ್ಲಿ ನಡೆದಿದೆ.

ಬ್ರೂಕ್ ಆಂಡರ್ಸನ್ (27 )ಬಂಧಿತ ಶಿಕ್ಷಕಿ. ಶಾಲಾ ತರಗತಿ ಪ್ರಾರಂಭವಾಗುವ ಸ್ವಲ್ಪ ಮೊದಲು ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದಾರೆ ಎಂದು ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ಆಂಡರ್ಸನ್ ಅಪ್ರಾಪ್ತ ವಯಸ್ಕನೊಂದಿಗೆ ತಿಂಗಳುಗಟ್ಟಲೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪ ಹೊತ್ತಿದ್ದಾರೆ. ಎರಡು ವಾರಗಳ ಹಿಂದೆ ಅಪ್ರಾಪ್ತನೊಂದಿಗೆ ಕಾನೂನುಬಾಹಿರ ಲೈಂಗಿಕ ಚಟುವಟಿಕೆಯ ಮೂರು ಆರೋಪಗಳನ್ನು ಎದುರಿಸಿದ್ದರು.

ಮೇ 16 ರ ಬೆಳಗ್ಗೆ ಆಂಡರ್ಸನ್ ಬಂಧನಕ್ಕೆ ಮುಂಚಿತವಾಗಿ ರಿವರ್‌ವ್ಯೂ ಪ್ರೌಢಶಾಲೆಯ ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಳು ಎಂದು ಆರೋಪಿಸಲಾಗಿದೆ.

ಹಿಲ್ಸ್‌ಬರೋ ಕೌಂಟಿಯ ಸಾರ್ವಜನಿಕ ಶಾಲಾ ಶಿಕ್ಷಕರ ಡೈರೆಕ್ಟರಿಯ ಪ್ರಕಾರ, ಆಂಡರ್ಸನ್ ರಿವರ್‌ವ್ಯೂ ಹೈಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಆದರೆ, ಬಂಧನದ ನಂತರ ಆ ಡೈರೆಕ್ಟರಿಯಿಂದ ಆಕೆಯ ಹೆಸರನ್ನು ತೆಗೆದುಹಾಕಲಾಯಿತು.

 

Related Articles

Back to top button