ಅನೈತಿಕ ಸಂಬಂಧ: ಪತಿ ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಗೋಣಿಚೀಲದಲ್ಲಿ ಶವ ಸಾಗಾಟ ವೈರಲ್!

Views: 219
ಕನ್ನಡ ಕರಾವಳಿ ಸುದ್ದಿ: ಅನೈತಿಕ ಸಂಬಂಧದ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಗೋಣಿಚೀಲದಲ್ಲಿ ಶವವನ್ನು ಕಟ್ಟಿಕೊಂಡು ಬೈಕಿನಲ್ಲಿ ಸಾಗಿಸಿದ್ದಾರೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಪರಾರಿಯಾದ ಪ್ರಿಯಕರನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.
ಮೃತ ವ್ಯಕ್ತಿಯನ್ನು ಧನ್ನಾಲಾಲ್ ಸೈನಿ ಎಂಬುದಾಗಿ ಗುರುತಿಸಲಾಗಿದೆ. ಆತನ ಪತ್ನಿ ಗೋಪಾಲಿ ದೇವಿ ಐದು ವರ್ಷಗಳಿಂದ ದೀನ್ ದಯಾಳ್ ಕುಶ್ವಾಹ ಅವನೊಂದಿಗೆ ಸಂಬಂಧ ಹೊಂದಿದ್ದಳಂತೆ. ಕುಶ್ವಾಹ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆದರೆ ಆಕೆ ಪತಿಯ ಬಳಿ ಆತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಳು. ತರಕಾರಿ ಮಾರಾಟಗಾರ ಸೈನಿ ಇತ್ತೀಚೆಗೆ ಪತ್ನಿ ಎಲ್ಲಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಅವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿ ಕೋಪಗೊಂಡ ಅವರ ಜೊತೆ ಜಗಳಕ್ಕೀಳಿದಿದ್ದಾನೆ.
ನಂತರ ಆರೋಪಿಗಳು ಸಂತ್ರಸ್ತನನ್ನು ಪುಸಲಾಯಿಸಿ ಮೇಲಿನ ಮಹಡಿಯಲ್ಲಿರುವ ಮತ್ತೊಂದು ಅಂಗಡಿಗೆ ಕರೆದೊಯ್ದು ಅಲ್ಲಿ ಅವರು ಕಬ್ಬಿಣದ ಪೈಪ್‍ನಿಂದ ಅವನ ತಲೆಗೆ ಹೊಡೆದು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಅವರು ಶವವನ್ನು ಪ್ಲಾಸ್ಟಿಕ್ ಗೋಣಿಚೀಲದಲ್ಲಿ ಪ್ಯಾಕ್ ಮಾಡಿ, ಬೈಕಿನಲ್ಲಿ ಸಾಗಿಸುವಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು.
ರಿಂಗ್ ರಸ್ತೆಯ ಬಳಿ, ಅವರು ಶವವನ್ನು ಇಳಿಸಿ ಬೆಂಕಿ ಹಚ್ಚಿದ್ದಾರೆ. ಆದರೆ ಕಾರೊಂದು ಅವರಿದ್ದ ಕಡೆ ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಓಡಿಹೋಗಿದ್ದಾರೆ. ಇದರಿಂದ ದೇಹವು ಅರ್ಧ ಸುಟ್ಟುಹೋಗಿತ್ತು. ಅರ್ಧ ಸುಟ್ಟ ದೇಹವು ಮುಖ್ಯ ರಸ್ತೆಯ ಬಳಿ ಪೊಲೀಸರಿಗೆ ಪತ್ತೆಯಾದರೂ ಶವದ ಗುರುತನ್ನು ಪತ್ತೆಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಎರಡು ದಿನಗಳ ನಂತರ ಅದನ್ನು ಗುರುತಿಸಲು ಸಾಧ್ಯವಾಯಿತು. ನಂತರ ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಆದರೆ ಕುಶ್ವಾಹ ಪರಾರಿಯಾಗಿದ್ದು, ಅವನನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.