ಇತರೆ

ಅಡಿಗಾಸ್ ಯಾತ್ರಾದಿಂದ ಮತ್ತೆ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ.. ಅಪಾರ ಜನ ಮನ್ನಣೆ ಪಡೆದ ಅಡಿಗಾಸ್ ಹಿನ್ನೆಲೆ ನಿಮ್ಮ ಮುಂದೆ…

Views: 95

ಕನ್ನಡ ಕರಾವಳಿ ಸುದ್ದಿ: 2020ರಲ್ಲಿ ಅನಿರೀಕ್ಷಿತವಾಗಿ ಸ್ಥಗಿತಗೊಂಡಿದ್ದ ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಯು ಮತ್ತೆ ಅಡಿಗಾಸ್ ಯಾತ್ರಾದಿಂದ ಪುನರಾರಂಭಗೊಂಡಿದೆ.

ಹಿಂದೂ ಧರ್ಮದಲ್ಲಿ ಹಲವಾರು ಕೈಲಾಸ ಮಾನಸ ಸರೋವರ ಯಾತ್ರೆ ಅತ್ಯಂತ ಪವಿತ್ರ ಹಾಗೂ ಅಷ್ಟೇ ಕಠಿಣವಾದುದು.

ಯಾತ್ರೆ ಯಾವಾಗ ಮತ್ತು ಹೇಗೆ?

ಅಡಿಗಾಸ್ ಯಾತ್ರಾದಿಂದ ವಿಮಾನ ಮತ್ತು ಹೆಲಿಕಾಪ್ಟರ್ ಮೂಲಕ 9 ದಿನಗಳ ಈ ಯಾತ್ರೆಯನ್ನು ಆಗಸ್ಟ್ 11. 21 ಹಾಗೂ 31ರಂದು 3 ತಂಡಗ ಳಲ್ಲಿ ಹೊರಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದೆ.

 ಯಾತ್ರೆಗೆ ಅರ್ಹತೆ ಏನು?

13 ವರ್ಷ ತುಂಬಿದ ಹಾಗೂ 70 ವರ್ಷದೊಳಗಿನ, 6 ತಿಂಗಳ ವಾಯಿದೆ ರುವ ಭಾರತೀಯರು ಯಾತ್ರೆಯಲ್ಲಿ ಭಾಗವಹಿಸಬಹುದು. 

ಯಾತ್ರೆಯ ರೂಪುರೇಷೆ ಏನು?

9 ದಿನಗಳ ಕಾಲಾವಧಿಯ ಈ ಯಾತ್ರೆಯು ಮೊದಲ ದಿನ ಲಕ್ಷ್ಮೀ ವಿಮಾನ ನಿಲ್ದಾಣದಿಂದ ಆರಂಭವಾಗ ಲಿದೆ. ಅಲ್ಲಿಂದ ನೇಪಾಳಗಂಜ್ ಗೆ 200 ಕಿ.ಮೀ. ಪ್ರಯಾಣ. ನೇಪಾಳಗಂಜ್ ನಿಂದ ಸಿಮಿಕೋಟ್‌ 50 ನಿಮಿಷದ ವಿಮಾನ ಪ್ರಯಾಣ, ಸಿಮಿಕೋಟ್ ನಿಂದ ಹಿಲ್ಲಾಗೆ ಹೆಲಿಕಾಪ್ಟರ್‌ನಲ್ಲಿ ಸಂಚಾರ. ಅಲ್ಲಿಂದ ಒಂದು ಗಂಟೆ ಪುರಾಂಗ್ ಎಂಬಲ್ಲಿಗೆ ವಾಹನದಲ್ಲಿ ಪ್ರಯಾಣಿಸಿ ವಿಶ್ರಮಿಸಿಕೊಳ್ಳುವುದು. ಪುರಾಂಗ್‌ನಲ್ಲಿ ವಾತಾವರಣಕ್ಕೆ ಹೊಂದಿ ಕೊಳ್ಳಲು ಒಂದು ದಿನ ವಿಶ್ರಾಂತಿ 

ಮರುದಿನ ಮಾನಸ ಸರೋವರಕ್ಕೆ ವಾಹನಗಳಲ್ಲಿ ಪ್ರಯಾಣ. ಮಾನಸ ಸರೋವರದಲ್ಲಿ ಪವಿತ್ರ ಸ್ನಾನ, ಪೂಜೆ ಇತ್ಯಾದಿ. ಮರುದಿನ ಮುಂಜಾನೆ ದಾರ್ಚೆನ್ ಮೂಲಕ ಕೈಲಾಸ ಪರಿಕ್ರಮ ಆರಂಭ. 7-8 ಗಂಟೆಗಳ ಪರಿಕ್ರಮದ ಬಳಿಕ ವಿಶ್ರಾಂತಿ. ಪರಿಕ್ರಮದ 2ನೇ ದಿನ ಯಾತ್ರೆಯು ಅತ್ಯಂತ ಕಠಿಣ ಹಾಗೂ ದುರ್ಗಮವಾದದ್ದು ಅಂದು ಯಾತ್ರಿಗಳು ಸಮುದ್ರ ಮಟ್ಟದಿಂದ 5,650 ಮೀ.ಎತ್ತರದ ದೋಲ್ಕಲಾ ಹಾಗೂ ಗೌರಿಕುಂಡ ಮಾರ್ಗವಾಗಿ 10ರಿಂದ 12 ತಾಸುಗಳ ಚಾರಣ ಮಾಡಬೇಕು. ಝುತುಲ್ ವುಕ್‌ನಲ್ಲಿ ವಿರಮಿಸಿ, 3ನೇ ದಿನದ ಬೆಳಗ್ಗೆ 2 ಗಂಟೆಯ ನಡಿಗೆಯೊಂದಿಗೆ ಕೈಲಾಸ ಪರ್ವತದ ಪರಿಕ್ರಮ ಮುಗಿಯಲಿದೆ.

ಬಳಿಕ ಹಿಲ್ಸಾ,ಸಿಮಿಕೋಟ್ ನೇಪಾಳ್ ಗಂಜ್‌ ಗೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಲಕ್ಷ್ಮೀಗೆ ವಾಹನದ ಮೂಲಕ ತಲುಪುವುದು.

ಕೈಲಾಸ ಪರ್ವತ ವಿಮಾನದಲ್ಲಿ 70 ವರ್ಷ ತುಂಬಿದ ಯಾತ್ರಿಕರಿದ್ದಲ್ಲಿ ಅವರಿಗೆ ಈ ಯಾತ್ರೆಯನ್ನು ಸಂಪೂರ್ಣವಾಗಿ ವಿಮಾನದಲ್ಲಿ ವೈಮಾನಿಕ ಪಕ್ಷಿ ನೋಟ ಆಯೋಜಿಸುವ ವ್ಯವಸ್ಥೆಯೂ ಇದೆ. 70 ವರ್ಷ ವಯೋಮಾನದ, ಆರೋಗ್ಯದ ಸಮಸ್ಯೆ ಇದ್ದರೂ ಕೈಲಾಸ ಪರ್ವತ ಹಾಗೂ ಮಾನಸ ಸರೋವರ ದರ್ಶನ ಮಾಡಬಹುದು. ಹೆಚ್ಚಿನ ವಿವರಗಳಿಗೆ ಅಡಿಗಾಸ್ ಕಚೇರಿ ಮೊ.. ಸಂ: 9449478944, ಇಮೇಲ್ ವಿಳಾಸ care@ adigas yatra.com ಅಥವಾ ವೆಬ್ಸೈಟ್ www.adigasyatra.com ಸಂಪರ್ಕಿಬಹುದು ಎಂದು ಸಂಸ್ಥಾಪಕ ಕೆ.ನಾಗರಾಜ ಅಡಿಗ ತಿಳಿಸಿದ್ದಾರೆ.

ಏನಿದು ಅಡಿಗಾಸ್ ಯಾತ್ರಾ ಹಿನ್ನಲೆ

ಅಡಿಗಾಸ್ ಯಾತ್ರಾ ಸಂಸ್ಥಾಪಕರು: ನಾಗರಾಜ್ ಅಡಿಗ

ಸತತ ಪಯತ್ನ, ಕಠಿಣ ಪರಿಶ್ರಮ ಹಾಗೂ ಹೊಸತನ್ನು ಅಳವಡಿಸಿಕೊಂಡು ಅದನ್ನು ಜಾರಿಗೊಳಿಸುವುದು ಪ್ರತಿ ಉಧ್ಯಮದ ಯಶಸ್ಸಿನ ಕೀಲಿ ಕೈ. ಅದರಲ್ಲೂ, ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ದಿನಕ್ಕೊಂದು ಹೊಸ ಆವಿಷ್ಕಾರಾದ ಪರ್ವಕಾಲದಲ್ಲಿ, ನಿರಂತರವಾಗಿ, ವಿಭಿನ್ನವಾಗಿ ಯೋಜನೆಗಳನ್ನು ಮೈಗೂಡಿಸಿಕೊಂಡು ಅವುಗಳ ಅನುಷ್ಠಾನದಲ್ಲಿ ಶಿಸ್ತಿನಿಂದ ಶ್ರಮಿಸುವುದು ಅತೀ ಅಗತ್ಯ. ಅಂತಹ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲ ಸಂಸ್ಥೆಗಳಲ್ಲೊಂದು ಶ್ರೀಯುತ ಕೆ. ನಾಗರಾಜ್ ಅಡಿಗರ “ಕನಸಿನ ಕೂಸು ” ಅಡಿಗಾಸ್ ಯಾತ್ರಾ / ಅಡಿಗಾಸ್ ವರ್ಲ್ಡ್ ಸಂಸ್ಥೆ. ಸಂಸ್ಥೆಗೀಗ 30 ರ ಹರೆಯ. ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು ಲೆಕ್ಕವಿಲ್ಲದಷ್ಟು…

ವಿಶ್ವಾಸ ಮತ್ತು ನಂಬಿಕೆ ಎಂಬ ಎರಡು ಆಧಾರ ಸ್ಥoಭಗಳ ಮೇಲೆ ನಿಂತಿರುವ ಪ್ರವಾಸೋಧ್ಯಮ ಕ್ಷೇತ್ರದಲ್ಲಿ 30 ವರ್ಷಗಳಿಂದ ತೊಡಗಿಸಿಕೊಂಡಿರುವ ಅಡಿಗಾಸ್ ಸಂಸ್ಥೆ ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಹಾದಿ ಬೀದಿ ಗೊಂದರಂತೆ ದಿನವೂ ಆರಂಭವಾಗಿ ಮುಚ್ಚಿ ಹೋಗುವ ನೂರಾರು ಟೂರ್ ಆಪರೇಟರ್ ಗಳ ಮಧ್ಯೆ ಅಡಿಗಾಸ್ ಸಂಸ್ಥೆ ತನ್ನದೇ ಚಾಪನ್ನು ಮೂಡಿಸಿ ಯಶಸ್ವಿಯಾಗಿ ಮುನ್ನೆಡೆದಿದೆ. ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಸಂಸ್ಥೆಯ ಮು ಡಿಗೇರಿದೆ. ಭಾರತ ಸರಕಾರದ ಪ್ರವಾಸೋಧ್ಯಮ ಸಚಿವಲಯದ ” ಅನುಭವಿ ಸೇವಾ ಪೂರೈಕೆದಾರ ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಇಲಾಖೆಯಿಂದ ಮಾನ್ಯತೆ, ಸತತ 4 ವರ್ಷಗಳಿಂದ ಅತ್ಯುತ್ತಮ ಪ್ರವಾಸಿ ಸಂಸ್ಥೆ ಎಂಬ ಹೆಗ್ಗಳಿಕೆ ಮತ್ತು ಪ್ರಶಸ್ತಿ, ಇಕನಾಮಿಕ್ಸ್ ಟೈಮ್ಸ್ ನಿಂದ ಉತ್ತಮ ಪ್ರವಾಸಿ ಸಂಸ್ಥೆ ಎಂಬ ಪ್ರಶಸ್ತಿ ಹೀಗೆ ಹತ್ತು ಹಲವಾರು, ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ.

ಅಡಿಗಾಸ್ ಸಂಸ್ಥೆಯು ಪ್ರವಾಸಿಗರ / ಯಾತ್ರಿಕರ ಅಭಿರುಚಿ ಹಾಗೂ ಬೇಡಿಕೆಗೆ ಅನುಗುಣವಾಗಿ 500 ಕ್ಕೂ ಹೆಚ್ಚು ಪ್ರವಾಸಗಳನ್ನು ದೇಶಿಯ, ಅಂತರ ರಾಷ್ಟ್ರೀಯ, ಗ್ರಾಹಕಾನುಕೂಲಿತ ಹಾಗೂ ಮಧುಚಂದ್ರ ಪ್ರವಾಸಗಳು ಯೋಜಿಸಿದೆ.

ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಯುರೋಪ್, ಯುಕೆ, ಆಸ್ಟ್ರೇಲಿಯಾ, ದುಬೈ, ಇಂಡೋನೆಷಿಯಾ, ಸಿಂಗಾಪುರ್, ಮಲೇಷಿಯಾ, ಥೈಲ್ಯಾಂಡ್, ಬಾಲಿ, ಶ್ರೀಲಂಕಾ, ನೇಪಾಳ ಮತ್ತು ಭೂತಾನ್ ಪ್ರವಾಸಗಳು ಅಪಾರ ಜನ ಮನ್ನಣೆಯನ್ನು ಗಳಿಸಿವೆ.

ಬಹುತೇಕ ಪ್ರವಾಸಿಗರಿಗೆ ವಿದೇಶಿ ಪ್ರವಾಸಕ್ಕೆ ಅಡಿಗಾಸ್ ಮೊದಲ ಆಯ್ಕೆ ಯಾಗಿರುತ್ತದೆ. ಅದಕ್ಕೆ ಕಾರಣಗಳು ಹಲವಾರು. ಸಹ ಪ್ರಯಾಣಿಕರು ಕರ್ನಾಟಕದವರೇ ಆಗಿದ್ದು, ಅವರ ಆಚಾರ ವಿಚಾರ, ಭಾಷೆ, ಸಂಸ್ಕೃತಿ ಹಾಗೂ ಉಟೋಪಹಾರ ದಲ್ಲಿ ಸಾಮ್ಯತೆ ಇರುವುದರಿಂದ ಪ್ರವಾಸವೂ ಯಶಸ್ವಿಯಾಗುತ್ತದೆ.

ಯಾವುದೇ ರೀತಿಯ home ಸಿಕ್ ಭಾವನೆ ಪ್ರವಾಸಿಗರಿಗೆ ಕಾಡುವುದಿಲ್ಲ.ವಿಶ್ವದರ್ಜೆಯ ಹೆಸರಾಂತ ಹೋಟೆಲ್ ಗಳಲ್ಲಿ ವಾಸ್ತವ್ಯ, ಸುಖಾಸೀನ, ಐಷಾರಾಮಿ ಬಸ್ ಗಳಲ್ಲಿ ಪ್ರಯಾಣ, ಕನ್ನಡ ಬಲ್ಲ ಅನುಭವೀ ಟೂರ್ ಮ್ಯಾನೇಜರ್, ಭಾರತೀಯ ರೆಸ್ಟೋರೆಂಟ್ ಗಳಲ್ಲಿ ಮೊದಲೇ ಕಾದಿರಿಸಿದ ಉತ್ತಮ ಊಟ- ಉಪಹಾರಗಳು ಇವೆಲ್ಲ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅಂತೆಯೇ, ಪ್ರತಿಯೊಬ್ಬ ಪ್ರವಾಸಿಗನೂ ಖಡ್ಡಾಯವಾಗಿ ಪಾವತಿಸಬೇಕಾದ ಡ್ರೈವರ್ ಟಿಪ್ಸ್, ಗೈಡ್ ಚಾರ್ಜಸ್, ಟ್ರಾವೆಲ್ ಇನ್ಸೂರೆನ್ಸ್, ವೀಸಾ ಎಲ್ಲವೂ ಒಳಗೊಂಡ ಪ್ರವಾಸಿದರ ಮತ್ತು ಪ್ರಮುಖ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನೂ ಸಂಸ್ಥೆ ವಿಧಿಸದೇ ಪ್ರವಾಸಿಗರ ಮೆಚ್ಚುಗೆಯನ್ನು ಗಳಿಸಿದೆ

ಇನ್ನುಳಿದಂತೆ ದೇಶಿಯ ಪ್ರವಾಸಗಳ ಬೇಡಿಕೆ ದುಪ್ಪಟ್ಟಾಗಿದೆ. ಭಾರತದಾದ್ಯಂತ ನಮ್ಮ ದಕ್ಷಿಣ ಭಾರತೀಯ ಉಟೋಪಹಾರ, ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣ, ಅತ್ಯುತ್ತಮ ಹೋಟೆಲ್ ಗಳ ವಾಸ್ತವ್ಯ, ಅನುಭವಿ ಟೂರ್ ಮ್ಯಾನೇಜರ್ ಗಳ ಸೇವೆ ಇವೆಲ್ಲ ಸೇರಿ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸುತ್ತದೆ.

ಇದಲ್ಲದೆ ಗ್ರಾಹಕಾನುಕೂಲಿತ ಮತ್ತು ಮಧುಚಂದ್ರ ಪ್ರವಾಸಗಳು ಪ್ರವಾಸಿಗರ ಆಯ್ಕೆಯಾದ ದಿನಾಂಕಕ್ಕೆ ಅವರ ಆದಾಯಕ್ಕನುಗುಣವಾಗಿ ಪಂಚಾತಾರಾ ಸೌಲಭ್ಯಗಳೊಂದಿಗೆ , ವ್ಯವಸ್ಥೆ ಮಾಡುವ ಸಾಮರ್ಥ್ಯ ಅಡಿಗಾಸ್ ಸಂಸ್ಥೆ ಹೊಂದಿದೆ.

Easy Pay ಎನ್ನುವ ಇನ್ನೊಂದು ಯೋಜನೆಯಲ್ಲಿ ಪೂರ್ವಯೋಜಿತವಾಗಿ ತಿಂಗಳಿಗೆ ನಿರ್ದಿಷ್ಟ ಮೊತ್ತದ ಹಣವನ್ನು 11 ತಿಂಗಳು ಜಮಾ ಮಾಡಿದಲ್ಲಿ 1 ತಿಂಗಳ ಕಂತನ್ನು ಸಂಸ್ಥೆ ಭರಿಸುತ್ತದೆ. ಇದು ಕೂಡಾ ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿದೆ.

Related Articles

Back to top button