ಜನಮನ
ಅಜ್ಜನ ಪ್ರಾಣ ಉಳಿಸಲು ಆ್ಯಂಬುಲೆನ್ಸ್ಗೆ ಕಾಯಲು ಸಮಯವಿಲ್ಲದೇ ಎಮರ್ಜೆನ್ಸಿ ವಾರ್ಡ್ಗೆ ಬೈಕ್ ನುಗ್ಗಿಸಿದ ಮೊಮ್ಮಗ !

Views: 116
ಆಸ್ಪತ್ರೆಯ ಒಳಗಿರುವ ಎಮರ್ಜೆನ್ಸಿ ವಾರ್ಡ್ಗೆ ನೇರವಾಗಿ ಅನಾರೋಗ್ಯದಿಂದ ಬಳಲುತ್ತಿರೋ ತನ್ನ ಅಜ್ಜನನ್ನ ಬೈಕ್ನಲ್ಲಿ ಕರೆದುಕೊಂಡು ಬಂದು ಯುವಕನೊಬ್ಬ ದಾಖಲು ಮಾಡಿದ್ದಾನೆ. ಈ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನ ಸತ್ನಾದಲ್ಲಿರೋ ಸರ್ದಾರ್ ವಲ್ಲಭ ಭಾಯ್ ಪಟೇಲ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಭೋಪಾಲ್ನ ತಿಕುರಿಯಾ ತೊಲಾ ನಿವಾಸಿ ದೀಪಕ್ ಗುಪ್ತಾ ಎಂಬ ವ್ಯಕ್ತಿಯ ಅಜ್ಜನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಅಜ್ಜನನ್ನು ಬೈಕ್ನಲ್ಲಿ ಕೂರಿಸಿಕೊಂಡು ಮೊಮ್ಮಗ ನೇರವಾಗಿ ಆಸ್ಪತ್ರೆಯ ಒಳಗಿನ ಎಮರ್ಜೆನ್ಸಿ ವಾರ್ಡ್ಗೆ ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ.
ಆ್ಯಂಬುಲೆನ್ಸ್ಗೆ ಕಾಯುವುದಕ್ಕೆ ಸಮಯವಿಲ್ಲದ ಕಾರಣ ಅಜ್ಜನನ್ನು ಥೇಟ್ ತ್ರಿ ಈಡಿಯೆಟ್ಸ್ ಸಿನಿಮಾ ದೃಶ್ಯದಂತೆ ಬೈಕ್‌ನಲ್ಲೇ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾನೆ.