‘ಅಗ್ನಿ ಸಾಕ್ಷಿ’ ನಟಿ ಶೋಭಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು ,ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥ ಪೋಟೋ ವೈರಲ್!

Views: 76
ಸೀರಿಯಲ್ ಖ್ಯಾತಿಯ ನಟಿ ಶೋಭಾ ಶೆಟ್ಟಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ನಿಶ್ಚಿತಾರ್ಥದ ಫೋಟೋಸ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶೋಭಾ ಶೆಟ್ಟಿ ತೆಲುಗು ಸೀರಿಯಲ್ನಲ್ಲಿ ಬ್ಯುಸಿ ಆಗಿದ್ದಾರೆ. ‘ಕಾರ್ತಿಕ ದೀಪಂ’ ಧಾರಾವಾಹಿಯಲ್ಲಿ ಮೋನಿತಾ ಪಾತ್ರದ ಮೂಲಕ ಫೇಮಸ್ ಆಗಿದ್ರು.
‘ಕಾರ್ತಿಕ ದೀಪಂ’ ನಟಿಸುತ್ತಿದ್ದ ಸಹ ನಟ ಯಶವಂತ್ ರೆಡ್ಡಿ ಅವರನ್ನು ಶೋಭಾ ಶೆಟ್ಟಿ ಮದುವೆಯಾಗುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ-ಯಶವಂತ್ ರೆಡ್ಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಮೂಲಕವಾಗಿ ಕನ್ನಡಿಗರ ಮನೆತಾಗಿದ್ದ ಹಾಗೂ ಬಿಗ್ಬಾಸ್ ತೆಲುಗು ಸ್ಪರ್ಧಿಯಾಗಿದ್ದ ನಟಿ ‘ಶೋಭಾ ಶೆಟ್ಟಿ’ಗೆ ಮದುವೆ ಫಿಕ್ಸ್ ಆಗಿದ್ದು, ಕುಟುಂಬಸ್ಥರು ತಾಂಬೂಲವನ್ನು ಬದಲಿಸಿಕೊಂಡಿದ್ದಾರೆ.
ತೆಲಗು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಕೊನೆಯವರೆಗೂ ಇದ್ದುಕೊಂಡು ಕಠಿಣ ಸ್ಪರ್ಧೆ ನೀಡಿ ಖ್ಯಾತಿ ಗಳಿಸಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ.. ಶೋಭಾಶೆಟ್ಟಿ ತನ್ನ ಬಾಯ್ ಫ್ರೆಂಡ್ ಅನ್ನು ಎಲ್ಲರಿಗೂ ಪರಿಚಯಿಸಿದರು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.
ಶೋಭಾಶೆಟ್ಟಿ ಮತ್ತು ಯಶವಂತ್ ತಮ್ಮ ಕುಟುಂಬ ಸದಸ್ಯರ ನಡುವೆ ಮದುವೆ ತಾಂಬೂಲ ಬದಲಿಸಿಕೊಂಡಿದ್ದಾರೆ. ಜತೆಗೆ ಎಲ್ಲರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಶೋಭಾಶೆಟ್ಟಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಂಬಂಧ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅದೇ ವೀಡಿಯೋದಲ್ಲಿ ಶೋಭಾ ಅವರು ತಾವು ಮತ್ತು ಯಶವಂತ್ ಅವರ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಎಲ್ಲಾ ದಿನಾಂಕಗಳನ್ನು ನೋಡಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ.ಇಷ್ಟು ಪ್ರೀತಿ ತೋರಿದ ಪ್ರೇಕ್ಷಕರಿಗೆ ಶೋಭಾ ಧನ್ಯವಾದ ಹೇಳಿದರು.