ಶಿಕ್ಷಣ

ಅಗಸ್ಟ್ 14 ರಿಂದ ಪದವಿ ತರಗತಿ ಆರಂಭಕ್ಕೆ ಮಂಗಳೂರು ವಿವಿ ನಿರ್ಧಾರ

Views: 0

ಮಂಗಳೂರು: ಜುಲೈ 17ಕ್ಕೆ ಪದವಿ ತರಗತಿ ಆರಂಭಿಸುವಂತೆ ಸರ್ಕಾರದಿಂದ ಏಕರೂಪದ ಕ್ಯಾಲೆಂಡರ್ ಹೊರಡಿಸಲಾಗಿದೆ. ಆದರೆ, ಆ ಸಮಯದಲ್ಲಿ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ಕಾರಣದಿಂದ ತರಗತಿ ನಡೆಸುವುದು ಕಷ್ಟ. ಹೀಗಾಗಿ ಅಗಸ್ಟ್ 14ಕ್ಕೆ ಪದವಿ ಮೊದಲ ವರ್ಷದ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಮಂಗಳೂರು ವಿ.ವಿ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ಹೇಳಿದ್ದಾರೆ.

ಮಂಗಳೂರು ವಿ.ವಿಯ 2,4 ನ ಹಾಗೂ 6ನೇ ಸೆಮಿಸ್ಟರ್ ಪರೀಕ್ಷೆ ಜುಲೈ 18ರ ಒಳಗೆ ಆರಂಭವಾಗಲಿದ್ದು ಅಗಸ್ಟ್ 10 ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಪದವಿ ಹೊಸ ತರಗತಿ ಆರಂಭಿಸಿದರೆ ತರಗತಿ ಕೊರತೆ ಎದುರಾಗುವ ಸಾಧ್ಯತೆಗಳು ಇವೆ.

ಶುಕ್ರವಾರ ಕಾಲೇಜು ಪ್ರಾಂಶುಪಾಲರ ಜೊತೆಗೆ ವಿಶೇಷ ಸಭೆಯನ್ನು ನಡೆಸಿದ್ದು .ಅಗಸ್ಟ್ 14ಕ್ಕೆ ತರಗತಿ ಆರಂಭವಾಗಲಿದೆ ಎಂದು ತಿಳಿಸಿದೆ.

Related Articles

Back to top button