SSLC, ITI ಪಾಸ್ ಆಗಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ; ಪರೀಕ್ಷೆ ಇಲ್ಲ,3 ಸಾವಿರಕ್ಕೂ ಅಧಿಕ ಹುದ್ದೆ ಭರ್ತಿ

Views: 192
ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಅಪ್ರೆಂಟಿಸ್ ಉದ್ಯೋಗಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 9 ರಂದು ನೋಟಿಫಿಕೇಶನ್ ರಿಲೀಸ್ ಮಾಡಲಾಗಿತ್ತು. ಅರ್ಜಿ ಇನ್ನು ಆರಂಭವಾಗಿಲ್ಲ. ಇದೇ ಸೆಪ್ಟೆಂಬರ್ 24ರಿಂದ ಅರ್ಜಿ ಪ್ರಾರಂಭ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಲಾಖೆಯ ಅಧಿಕೃತ ವೆಬ್ಸೈಟ್ rrcer.org. ಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು
ಇನ್ನು ಈ ಪರೀಕ್ಷೆಗಳಿಗೆ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್ ಮತ್ತು ITI ಪರೀಕ್ಷೆಗಳಿಂದ ಸರಾಸರಿ ಅಂಕಗಳ ಮೇಲೆ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ. ಮೆರಿಟ್ ಲಿಸ್ಟ್ ಆದ ಮೇಲೆ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಸಮ ಅಂಕಗಳನ್ನು ಹೊಂದಿದ್ದರೇ ಫಸ್ಟ್ ಪಾಸ್ ಆಗಿದ್ದವರನ್ನು ಪರಿಗಣಿಸಲಾಗುತ್ತದೆ. ಆನ್ಲೈನ್ನಲ್ಲಿ ಅಪ್ಲೇ ಮಾಡಿದ ಎಲ್ಲ ದಾಖಲೆಗಳನ್ನು ಅಭ್ಯರ್ಥಿಗಳು ತರಬೇಕಾಗುತ್ತದೆ.
ಒಟ್ಟು 3115 ಹುದ್ದೆಗಳು ಭರ್ತಿ
ಹೌರಾ ವಿಭಾಗ- 659
ಲಿಲುವಾ ಕಾರ್ಯಾಗಾರ- 612
ಸೀಲ್ದಾ ವಿಭಾಗ- 440
ಕಂಚುರಪಾರ ಕಾರ್ಯಾಗಾರ- 187
ಮಾಲ್ಡಾ ವಿಭಾಗ- 138
ಅಸನ್ಸೋಲ್ ವಿಭಾಗ- 412
ಜಮಾಲ್ಪುರ್ ಕಾರ್ಯಾಗಾರ- 667
ಅರ್ಜಿ ಶುಲ್ಕ ಎಷ್ಟು?
ಜನರಲ್ ಅಭ್ಯರ್ಥಿಗಳಿಗೆ- 100 ರೂಪಾಯಿಗಳು
ಎಸ್ಸಿ, ಎಸ್ಟಿ- ಮೀಸಲಾಯಿತಿ ವಿನಾಯಿತಿ ಇರುತ್ತದೆ
ಸ್ಯಾಲರಿ- ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಆಗಿದ್ದರಿಂದ ಉತ್ತಮ ಮಟ್ಟದ ಸಂಬಳ ಇರುತ್ತದೆ.
ಪೋಸ್ಟ್ ಹೆಸರು- ಅಪ್ರೆಂಟಿಸ್
ವಿದ್ಯಾರ್ಹತೆ- SSLC ಜೊತೆ ಐಟಿಐ ಪಾಸ್ ಆಗಿರಬೇಕು
ವಯೋಮಿತಿ- 15 ವರ್ಷದಿಂದ 24 ವರ್ಷದ ಒಳಗಿನವರು
ಈ ಹುದ್ದೆಗೆ ಸಂಬಂಧಿಸಿದ ದಿನಾಂಕಗಳು..?
ನೋಟಿಫಿಕೇಶನ್ ಪ್ರಕಟ- ಸೆಪ್ಟೆಂಬರ್ 09
ಅರ್ಜಿ ಹಾಕಲು ಪ್ರಾರಂಭ- ಸೆಪ್ಟೆಂಬರ್ 24
ಅರ್ಜಿ ಕೊನೆ ದಿನಾಂಕ- ಅಕ್ಟೋಬರ್ 23






