ಆರ್ಥಿಕ

SBI ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ

Views: 159

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಉದ್ಯೋಗಗಳನ್ನು ಕಾಲ್ ಫಾರ್ಮ್ ಮಾಡಿದೆ. 1500ಕ್ಕೂ ಅಧಿಕ ಹುದ್ದೆಗಳಿದ್ದು, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದು ದಿನಾಂಕವನ್ನು ವಿಸ್ತರಿಸಿದೆ.

ಈ ಮೊದಲು ಕರೆದಾಗ ಅರ್ಜಿ ಹಾಕದೇ ಇರುವವರು ಈಗ ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಕೆಳಗಿನ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಹುದ್ದೆಗೆ ಅರ್ಹರು ಎನಿಸಿಕೊಂಡರೇ ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಎಷ್ಟು ಹುದ್ದೆಗಳು, ಶೈಕ್ಷಣಿಕ ಅರ್ಹತೆ ಏನು, ಅರ್ಜಿ ಶುಲ್ಕ ಎಷ್ಟು, ಆಯ್ಕೆ ಹೇಗೆ ನಡೆಯುತ್ತದೆ ಎನ್ನುವ ಇತ್ಯಾದಿ ಮಾಹಿತಿಗಳು ಇಲ್ಲಿ ನೀಡಲಾಗಿದೆ.

ಸೆಪ್ಟೆಂಬರ್ನಲ್ಲಿ ನೋಟಿಫಿಕೇಶನ್ ಅನ್ನು ಬ್ಯಾಂಕ್ ಹೊರಡಿಸಿತ್ತು. ಅದರಂತೆ ಅರ್ಜಿಗಳನ್ನು ಸೆಪ್ಟೆಂಬರ್ 14 ರಿಂದ ಆರಂಭಿಸಿ ಅಕ್ಟೋಬರ್ 04ಕ್ಕೆ ಕೊನೆ ಮಾಡಿತ್ತು.

ಹುದ್ದೆಗಳು ಎಷ್ಟು?

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ & ಡಿಲವರಿ= 187 ಹುದ್ದೆಗಳು

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫ್ರಾ ಸಪೋರ್ಟ್ & ಕುಡ್ ಆಫರೇಶನ್= 412 ಹುದ್ದೆಗಳು

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ನೆಟ್ವರ್ಕಿಂಗ್ ಆಫರೇಶನ್ಸ್= 80 ಪೋಸ್ಟ್ಗಳು

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಐಟಿ ಆರ್ಕಿಟೆಕ್= 27 ಪೋಸ್ಟ್

ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್)- 784 ಹುದ್ದೆಗಳು

ಸಂಸ್ಥೆಯ ಹೆಸರು– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)

ಹುದ್ದೆಯ ಹೆಸರು- ಸ್ಪೆಷಲ್ ಕೇಡರ್ ಆಫೀಸರ್

ಒಟ್ಟು ಹುದ್ದೆಗಳು- 1,511

ವಿದ್ಯಾರ್ಹತೆ- ಬಿಇ/ ಬಿಟೆಕ್, ಎಂಸಿಎ, ಎಂಇ/ಎಂಟೆಕ್, ಎಂಎಸ್ಸಿ

ಆಯ್ಕೆ ಪ್ರಕ್ರಿಯೆ 

ಆನ್ಲೈನ್ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದಂತ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ವೇತನ

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ & ಡಿಲವರಿ= ₹64,820- ₹93,960

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫ್ರಾ ಸಪೋರ್ಟ್ & ಕುಡ್ ಆಫರೇಶನ್= ₹64,820- ₹93,960

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ನೆಟ್ವರ್ಕಿಂಗ್ ಆಫರೇಶನ್ಸ್= 64,820- ₹93,960

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಐಟಿ ಆರ್ಕಿಟೆಕ್= 64,820- ₹93,960

ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್)- ₹48,480- ₹85,920

ಅರ್ಜಿ ಶುಲ್ಕ

ಜನರಲ್, ಇಡಬ್ಲುಎಸ್, ಒಬಿಸಿ- 750 ರೂಪಾಯಿ

ಎಸ್ಸಿ, ಎಸ್ಟಿ, ವಿಶೇಷ ಚೇತನರು- ಇಲ್ಲ

ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು

ವಯಸ್ಸು

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ & ಡಿಲವರಿ= 25-35 ವರ್ಷ

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫ್ರಾ ಸಪೋರ್ಟ್ & ಕುಡ್ ಆಫರೇಶನ್= 25-35 ವರ್ಷ

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ನೆಟ್ವರ್ಕಿಂಗ್ ಆಫರೇಶನ್ಸ್= 25-35 ವರ್ಷಗಳು

ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಐಟಿ ಆರ್ಕಿಟೆಕ್= 25-35 ವರ್ಷಗಳು

ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ್)- 21 ರಿಂದ 30 ವರ್ಷಗಳು

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನ- ಅಕ್ಟೋಬರ್ 14, 2024 (ವಿಸ್ತರಣೆ)

ಈ ಹುದ್ದೆಗಳ ಸಂಪೂರ್ಣ ಮಾಹಿತಿಗಾಗಿ- https://sbi.co.in/documents/77530/43947057/130924-DETAIL+ADV_GITC+REGULAR_SCO_2024-25_15.pdf/0cc2be40-6407-ecdb-3099-effd169f7709?t=1726224993068

Related Articles

Back to top button