Loksabha Election 2024:EVM,VVPAT ಎಂದರೇನು.?..ಇದರ ಕಾರ್ಯವೇನು..?

Views: 83
ಮತಗಟ್ಟೆ ಸಿಬ್ಬಂದಿಗಳು ಮತದಾರರ ಗುರುತಿನ ಚೀಟಿಯನ್ನು ಗಮನಿಸಿ ದೃಢೀಕರಿಸಿದ ನಂತರ ಮತದಾರರು ಇವಿಎಂ ಮೂಲಕ ಮತ ಚಲಾಯಿಸುತ್ತಾರೆ. ಅಭ್ಯರ್ಥಿಗಳ ಹೆಸರು, ಚಿಹ್ನೆ ಪಕ್ಕದಲ್ಲಿರುವ ನೀಲಿ ಸ್ವಿಚ್ ಒತ್ತಿದರೆ ನಿಮ್ಮ ಮತದಾನ ಮುಗಿದಂತೆ. ನಂತರ ಅದು ವಿವಿ ಪ್ಯಾಟ್‌ನಲ್ಲಿ ಸುರಕ್ಷಿತವಾಗಿರುತ್ತದೆ.
ವಿವಿ ಪ್ಯಾಟ್ (VV Pat) ಎಂದರೆ, ಇವಿಎಂ ಪಕ್ಕದಲ್ಲಿ ಬಾಕ್ಸ್ ಆಕಾರದಲ್ಲಿರುವ ಮತ್ತೊಂದು ಮತಯಂತ್ರ. ವೋಟರ್ ವೆರಿಯಬಲ್ ಪೇಪರ್ ಆಡಿಟ್ ಟ್ರಯಲ್ ಅನ್ನೋದು ಇದರ ವಿಸ್ಕೃತ ರೂಪ.
ನಾವು ಯಾವ ಪಕ್ಷದ ಗುರುತಿಗೆ ಮತ ಹಾಕಿದ್ದೇವೆ ಎಂಬುದನ್ನು 7 ಸೆಕೆಂಡ್ ಒಳಗಾಗಿ ವಿವಿ ಪ್ಯಾಟ್ ಮೂಲಕ ನಾವು ಅಧಿಕೃತವಾಗಿ ದೃಢಪಡಿಸಿಕೊಳ್ಳಬಹುದು.
1982 ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ನಂತರ 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ನಡೆದ ಚುನಾವಣೆಯ 25 ವಿಧಾನಸಭೆ ಕ್ಷೇತ್ರಗಳಲ್ಲಿ ಇವಿಎಂ ಬಳಕೆ ಮಾಡಲಾಗಿತ್ತು. 2004 ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 543 ಕ್ಷೇತ್ರಗಳ ಚುನಾವಣೆಗೂ ಇವಿಎಂ ಬಳಸಲಾಗಿತ್ತು. ಅಂದಿನಿಂದ ದೇಶದ ಎಲ್ಲಾ ಚುನಾವಣೆಗೂ ಇವಿಎಂ ಬಳಕೆ ಮಾಡಲಾಗುತ್ತಿದೆ.

ಮತದಾನ ಮುಗಿದ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಸ್ಟ್ರಾಂಗ್ ರೂಮ್ ಹೆಸರಿನ ಕೋಣೆಯಲ್ಲಿ ಭಾರೀ ಭದ್ರತೆಯೊಂದಿಗೆ ಇಡಲಾಗುತ್ತದೆ. ಸಿಪಿಎಫ್ ಪಡೆ ದಿನದ 24 ಗಂಟೆ ಸ್ಟ್ರಾಂಗ್ ರೂಮ್‌ಗೆ ಕಾವಲಿರುತ್ತದೆ. ಮತ ಎಣಿಕೆ ದಿನ ಇವಿಎಂ, ವಿವಿ ಪ್ಯಾಟ್‌ಗಳನ್ನು ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ತರಲಾಗುತ್ತದೆ
ಮತದಾನ ಮುಗಿದ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಸ್ಟ್ರಾಂಗ್ ರೂಮ್ ಹೆಸರಿನ ಕೋಣೆಯಲ್ಲಿ ಭಾರೀ ಭದ್ರತೆಯೊಂದಿಗೆ ಇಡಲಾಗುತ್ತದೆ. ಸಿಪಿಎಫ್ ಪಡೆ ದಿನದ 24 ಗಂಟೆ ಸ್ಟ್ರಾಂಗ್ ರೂಮ್‌ಗೆ ಕಾವಲಿರುತ್ತದೆ. ಮತ ಎಣಿಕೆ ದಿನ ಇವಿಎಂ, ವಿವಿ ಪ್ಯಾಟ್‌ಗಳನ್ನು ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ತರಲಾಗುತ್ತದೆ.