ಜನಮನ

HSRP ಫಲಕ ಅಳವಡಿಸಲು ಗಡುವು ವಿಸ್ತರಿಸಿ, ಶೇಕಡ10 ರಷ್ಟು ನೋಂದಣಿ ಆಗಿಲ್ಲ, ಅವಧಿ ವಿಸ್ತರಿಸಲು ವಾಹನ ಮಾಲಕರ ಒತ್ತಾಯ 

Views: 92

ವಾಹನಗಳ ಹಳೆಯ ನಂಬರ್ ಪ್ಲೇಟ್ ಬದಲಾಯಿಸಿ ಅತಿಸುರಕ್ಷಿತ ನೋಂದಣಿ ಪಲಕ ಎಚ್ಎಸ್ಆರ್‌ಪಿ ಅಳವಡಿಸಲು ವಿಧಿಸಿದ್ದ ಗಡುವು ಸಮೀಪಿಸುತ್ತಿರುವ ಬೆನ್ನಲ್ಲೇ ವಾಹನಗಳ ಮಾಲೀಕರಿಂದ ಗಡು ವಿಸ್ತರಣೆಗೆ ಒತ್ತಾಯಿಸಿದ್ದಾರೆ.

ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ವಿಧಾನಗತಿಯಿಂದ ಹಿಡಿದು ಹತ್ತುಹಲವಾರು ತಾಂತ್ರಿಕ ತೊಂದರೆಗಳು ಎಚ್ಎಸ್ಆರ್‌ಪಿ ಬುಕ್ಕಿಂಗ್ ವೇಳೆ ಕಂಡುಬಂದಿದೆ ಹಾಗಾಗಿ ಫೆಬ್ರವರಿ 17ರ ಒಳಗೆ ಬುಕಿಂಗ್ ಮತ್ತು ಅಳವಡಿಸಲು ಕಷ್ಟ ಸಾಧ್ಯ. ಬಹುತೇಕರು ಸರಿಯಾದ ಸಮಯಕ್ಕೆ     ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪರಿಣಾಮ ಹೊಸ ವ್ಯವಸ್ಥೆಯಿಂದ ಹೊರಗುಳಿಯಬೇಕಾಗುತ್ತದೆ. ಆದ್ದರಿಂದ ಇನ್ನೂ  ಕನಿಷ್ಠ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ವಾಹನ ಮಾಲೀಕರು ಒತ್ತಾಯಿಸಿ ದ್ದಾರೆ.

ಶೇಕಡ 10ರಷ್ಟು ಅಳವಡಿಕೆಯಾಗಿಲ್ಲ!

ಕಳೆದ ನಾಲ್ಕು ತಿಂಗಳಲ್ಲಿ ಎಚ್ಎಸ್ಆರ್‌ಪಿಗೆ ಪರಿವರ್ತನೆ ಆಗಬೇಕಾದ ಒಟ್ಟಾರೆ ವಾಹನಗಳ ಪೈಕಿ ಶೇಕಡ 10ರಷ್ಟು ಇದುವರೆಗೂ ಅಳವಡಿಕೆಯಾಗಿಲ್ಲ ಅಂದರೆ ಅಳವಡಿಕೆ ಮಾಡಿಕೊಳ್ಳಬೇಕಾದ ವಾಹನಗಳ ಸಂಖ್ಯೆ 1.80 ಕೋಟಿಗೂ ಅಧಿಕ 13 ರಿಂದ 14 ಲಕ್ಷ ವಾಹನಗಳಿಗೆ ಹೊಸ ನಾಮಫಲಕ ಹಾಕಲಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಅಧಿಕವಾಗಿದೆ. ಹೆಚ್ಚಿನ ಜನರು ಇನ್ನೂ ಎಚ್ಎಸ್ಆರ್‌ಪಿಯಿಂದ ದೂರ ಉಳಿದಿದ್ದು ರಾಜ್ಯದ ಹಲವು ಭಾಗಗಳಿಂದ ವಾಹನ ಮಾಲಿಕರಿಂದ ಗಡುವು ವಿಸ್ತರಣೆಗೆ ಒತ್ತಾಯ ಕೇಳಿ ಬಂದಿದೆ.

ಈ ಹಿನ್ನಲೆಯಲ್ಲಿ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಯಲಾಗಿದೆ.

HSRP ಅಳವಡಿಸುವುದು ಹೇಗೆ?

ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ :https://transport.karnataka.gov.in ಗೆ ಭೇಟಿ ನೀಡಿ ಅಲ್ಲಿ ಎಚ್ಎಸ್ಆರ್‌ಪಿಗೆ ಕೋರಿಕೆ ಸಲ್ಲಿಸಬೇಕು ನಂತರ ನೋಂದಣಿ ಪತ್ರ ಒಳಗೊಂಡಂತೆ ಅಗತ್ಯ ದಾಖಲೆಗಳನ್ನು ದಾಖಲಿಸಬೇಕು ಇದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೋಗುತ್ತದೆ. ಅಲ್ಲಿ ಹತ್ತಿರದ ಡೀಲರ್ ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು.ತದನಂತರ ದಿನಾಂಕ ಮತ್ತು ಸಮಯ ನಿಗದಿ ಮಾಡಲಾಗುತ್ತದೆ. ಜೊತೆಗೆ ಆಯಾ ಸಮೀಪದ ಡೀಲರ್ ಗೆ ಸಂದೇಶ ತಲುಪುತ್ತದೆ ನಿಗದಿಪಡಿಸಿದ ದಿನಾಂಕ ನಂಬರ್ ಪ್ಲೇಟ್ ಅಳವಡಿಸಬೇಕು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ

Related Articles

Back to top button