BREAKING NEWS, ಅರವಿಂದ್ ಕೇಜ್ರಿವಾಲ್ ಹೀನಾಯ ಸೋಲು..!

Views: 242
ಕನ್ನಡ ಕರಾವಳಿ ಸುದ್ದಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಮುಖಭಂಗ ಆಗಿದೆ. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅರವಿಂದ್ ಕೇಜ್ರಿವಾಲ್ ಹೀನಾಯವಾಗಿ ಸೋತಿದ್ದಾರೆ.
ಬಿಜೆಪಿಯಿಂದ ನವದೆಹಲಿ ವಿಧಾನಸಭಾ ಕ್ಷೇತ್ರಕ್ಕೆ ಪರ್ವೇಶ್ ವರ್ಮಾ ಕಣಕ್ಕಿಳಿದಿದ್ದರು. ವರ್ಮಾ ವಿರುದ್ಧ ಕೇಜ್ರಿವಾಲ್ 3182 ಮತಗಳಿಂದ ಸೋತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಅನುಭವಿಸಿದೆ. 70 ಕ್ಷೇತ್ರಗಳ ಪೈಕಿ ಕೇವಲ 23 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಮುನ್ನಡೆ ಸಾಧಿಸಿದೆ. ಇನ್ನು ಪ್ರತಿಸ್ಪರ್ಧಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದೆ.
ಸದ್ಯದ ವರದಿಗಳನ್ನು ಗಮನಿಸಿದ್ರೆ ಬಿಜೆಪಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೆ ಬರೋದು ಪಕ್ಕಾ ಆಗ್ತಿದೆ. ಸರ್ಕಾರ ರಚನೆಗೆ 36 ಮ್ಯಾಜಿಕ್ ನಂಬರ್. ಈ ಸಂಖ್ಯೆಯನ್ನು ಬಿಜೆಪಿ ಈಗಾಗಲೇ ಕ್ರಾಸ್ ಮಾಡಿ ಮುನ್ನುಗ್ಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಬಿಜೆಪಿ ದರ್ಬಾರ್ ಮತ್ತೆ ಆರಂಭವಾಗಲಿದೆ.ಅರವಿಂದ್ ಕೇಜ್ರಿವಾಲ್ಗೆ ಟಕ್ಕರ್ ಕೊಟ್ಟಿರುವ ಪರ್ವೇಶ್ ವರ್ಮಾ, ಈ ಹಿಂದೆ ಎರಡು ಬಾರಿ ಸಂಸದರಾಗಿದ್ದಾರೆ.






