ಜನಮನ

BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಆಹ್ವಾನ

Views: 106

ಕನ್ನಡ ಕರಾವಳಿ ಸುದ್ದಿ: ತಾಂತ್ರಿಕ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 300ಕ್ಕೂ ಅಧಿಕ ಉದ್ಯೋಗಗಳಿದ್ದು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಆಗಿದೆ.

ಉದ್ಯೋಗ ಆಕಾಂಕ್ಷಿಗಳ ಅರ್ಹತೆ, ಖಾಲಿ ಹುದ್ದೆಗಳೆಷ್ಟು, ಆಯ್ಕೆ ಪ್ರಕ್ರಿಯೆ ಹೇಗಿದೆ, ಪರೀಕ್ಷೆಯ ಮಾದರಿ ಮತ್ತು ಇತರ ವಿವರ ಇಲ್ಲಿ ನೀಡಲಾಗಿದೆ.

ಉದ್ಯೋಗಗಳ ವರ್ಗೀಕರಣ- ಸಾಮಾನ್ಯ (ಯುಆರ್) 143, ಇಡಬ್ಲುಎಸ್ 35, ಒಬಿಸಿ 94, ಎಸ್ಸಿ 52 ಹಾಗೂ ಎಸ್ಟಿ 26 ಉದ್ಯೋಗಗಳು ಇವೆ.

ಉದ್ಯೋಗದ ಹೆಸರು– ಪ್ರೊಬೇಷನರಿ ಇಂಜಿನಿಯರ್ ಹುದ್ದೆ

ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್)- 200 ಉದ್ಯೋಗ

ಪ್ರೊಬೇಷನರಿ ಇಂಜಿನಿಯರ್ (ಮೆಕನಿಕಲ್)- 150 ಉದ್ಯೋಗ

ಒಟ್ಟು 350 ಉದ್ಯೋಗಗಳು

ಆಯ್ಕೆ ಪ್ರಕ್ರಿಯೆ- ಕಂಪ್ಯೂಟರ್ ಬೇಸ್ ಟೆಸ್ಟ್, ಸಂದರ್ಶನ, ವೈದ್ಯಕೀಯ ಪರೀಕ್ಷೆ

ಮಾಸಿಕ ವೇತನ– 40,000 ದಿಂದ 1,40,000 ರೂಪಾಯಿಗಳು

ಬಿಇಎಲ್ ಸಂಸ್ಥೆಯ ವೆಬ್ಸೈಟ್- https://bel-india.in/

ಶೈಕ್ಷಣಿಕ ಅರ್ಹತೆ

ಬಿಇ, ಬಿಟೆಕ್, ಬಿಎಸ್ಸಿ, (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಮೆಕನಿಕಲ್)

ಅರ್ಜಿ ಶುಲ್ಕ-

ಸಾಮಾನ್ಯ (ಯುಆರ್), ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- ಜಿಎಸ್ಟಿ ಸೇರಿ 1180 ರೂಪಾಯಿ

ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ವಿನಾಯತಿ ಇದೆ

ವಯೋಮಿತಿ– 25 ವರ್ಷಗಳು

ಪ್ರಮುಖ ದಿನಾಂಕಗಳು ಹೀಗಿವೆ

ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ- 10 ಜನವರಿ 2025

ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 10 ಜನವರಿ 2025

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 31 ಜನವರಿ 2025

ಸಂಸ್ಥೆಯು ಪರೀಕ್ಷೆ ನಡೆಸುವ ತಿಂಗಳು- ಮಾರ್ಚ್ 2025

ಅರ್ಜಿ ಸಲ್ಲಿಸಲು https://test.cbexams.com/EDPSU/BEL/Apps/Registration/RegStep.aspx

 

Related Articles

Back to top button