A++ ಗ್ರೇಡ್ ನೀಡಲು 37 ಲಕ್ಷ ರೂ. ಲಂಚ ಆರೋಪ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಅಮಾನತು

Views: 88
ಕನ್ನಡ ಕರಾವಳಿ ಸುದ್ದಿ: ನ್ಯಾಕ್ ಕಮಿಟಿಯಿಂದ ಎ++ ಗ್ರೇಡ್ ನೀಡಲು ಲಂಚ ಪಡೆದ ಪ್ರಕರಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಸಿಬಿಐ ಬಂಧಿಸಿದ ಬೆನ್ನಲ್ಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ದಾವಣಗೆರೆ ವಿವಿ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿದೆ. ಕೆಸಿಎಸ್‍ಆರ್ ನಿಯಮದ ಪ್ರಕಾರ ಆರು ತಿಂಗಳವರೆಗೆ ಅವರನ್ನು ಅಮಾನತಿನಲ್ಲಿಡಲು ಸಿಂಡಿಕೇಟ್ ನಿರ್ಣಯಕೈಗೊಂಡಿದೆ. ಆದೇಶದ ಪ್ರತಿಯನ್ನು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ ಕುಂಬಾರ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.
ನ್ಯಾಕ್‍ನ ತಪಾಸಣಾ ಸಮಿತಿ ಸದಸ್ಯರಾಗಿರುವ ಗಾಯತ್ರಿ ದೇವರಾಜ್ ಅವರನ್ನು ಲಂಚ ಪಡೆದ ಆರೋಪದ ಮೇಲೆ ಇತ್ತಿಚೆಗೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಆಂಧ್ರ ಪ್ರದೇಶದ ವಿಜಯವಾಡದ ಕೆಎಲ್‍ಇಎಫ್ ಯುನಿವರ್ಸಿಟಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಪಡೆದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
ಜೆಎನ್‍ಯು ಪ್ರೊಫೆಸರ್ ಸೇರಿದಂತೆ ಒಟ್ಟು 10 ಜನರನ್ನು, 37 ಲಕ್ಷ ರೂ. ನಗದು, 6 ಲ್ಯಾಪಟಾಪ್, ಐಫೋನ್ ಲಂಚ ಪಡೆಯುವಾಗ ಸಿಬಿಐ ಬಂಧಿಸಿತ್ತು. ಎ++ ಗ್ರೇಡ್ ನೀಡಲು ಒಂದು ಕೋಟಿ ರೂ.ಗೂ ಹೆಚ್ಚು ಲಂಚದ ಹಣಕ್ಕೆ ನ್ಯಾಕ್ ಕಮಿಟಿ ಬೇಡಿಕೆ ಇಟ್ಟಿತ್ತು. ನ್ಯಾಕ್ ಕಮಿಟಿಯಲ್ಲಿ ದಾವಣಗೆರೆ ವಿವಿಯ ಏಕೈಕ ಪ್ರೊ.ಗಾಯತ್ರಿ ದೇವರಾಜ್ ಸ್ಥಾನ ಪಡೆದಿದ್ದರೆ.
ಈ ಹಿಂದೆ ಅವರು ಒಂದು ವರ್ಷ 4 ತಿಂಗಳುಗಳ ಕಾಲ ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು
ಈ ಹಿಂದೆ ಅವರು ಒಂದು ವರ್ಷ 4 ತಿಂಗಳುಗಳ ಕಾಲ ದಾವಣಗೆರೆ ವಿವಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಮೈಕ್ರೋ ಬಯೋಲಜಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.