ಸಾಮಾಜಿಕ
ಪ್ರೀತಿಗೆ ಮನಸೋತು ತೃತೀಯ ಲಿಂಗಿಗೆ ತಾಳಿ ಕಟ್ಟಿದ ಯುವಕ

Views: 0
ಆಂಧ್ರಪ್ರದೇಶ: ಪ್ರೀತಿಗೆ ಮನಸೋಲದವರು ಯಾರು ಇಲ್ಲ. ಅದರಂತೆಯೇ ಇಲ್ಲೊಬ್ಬ ಯುವಕ ತೃತಿಯ ಲಿಂಗಿಯ ಪ್ರೀತಿಗೆ ಬಿದ್ದು ಆಕೆಯನ್ನು ವರಿಸಿದ ಘಟನೆ ಆಂಧ್ರಪ್ರದೇಶದ ಖಮ್ಮಂ ನಡೆದಿದೆ.
ಆದರೆ ಈ ಇಬ್ಬರಿಗೆ ಯುವಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗಣೇಶ್ ಎಂಬ ಯುವಕ ಆಂಧ್ರಪ್ರದೇಶದ ನಂದಿಪಟ್ಟಣದ ತೃತೀಯ ಲಿಂಗಿ ದೀಪು ಎಂಬಾಕೆಯ ಪ್ರೀತಿಗೆ ಮನಸೋತು ಆಕೆಯನ್ನು ವಿವಾಹವಾಗಿದ್ದಾನೆ.
ಅಂದಹಾಗೆಯೇ ಗಣೇಶ್ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ಪ್ರೀತಿಗೆ ತಿರುಗಿ ಸದ್ಯ ಈ ಜೋಡಿ ವಿವಾಹವಾಗಿದ್ದಾರೆ.
ಗಣೇಶ್ ಮತ್ತು ದೀಪು ವಿವಾಹದ ಸಂಗತಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಫೋಟೋ, ವಿಡಿಯೋ ವೈರಲ್ ಆಗಿದೆ. ಬಳಿಕ ಗಣೇಶ್ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.






