ಹಬ್ಬದ ಜೋಶ್ ನಲ್ಲಿ ಮೈಮರೆತು ಸಕತ್ ಡಾನ್ಸ್ ಇತ್ತೀಚೆಗೆ ಹೆಚ್ಚು ಹೃದಯಾಘಾತ; ಕಾರಣ ಏನು?
ಹಬ್ಬ ಸಂಭ್ರಮ ಅಂತಾ ಜೋಶ್ ನಲ್ಲಿ ಮೈಮರೆತು ಸಕತ್ ಕುಣಿತಾ, ಅಣ್ಣಮ್ಮನ ಸ್ಟೆಪ್ಸ್, ಡಿಜೆಯೊಂದಿಗೆ ಮೆಹೆಂದಿ ನೃತ್ಯ ಗಾರ್ಬಾ ಕುಣಿತ ಮಾಡುವ ಮುನ್ನ ಅಲರ್ಟ್. ಹೃದಯದ ಆರೋಗ್ಯದ ಬಗ್ಗೆ ತಿಳಿಯದೇ ಹೃದಯದ ಹಿಸ್ಟರಿ ಅರಿಯದೇ ಹಿಂದೆ ಮುಂದೆ ನೋಡದೇ ಅತಿಯಾದ ದೈಹಿಕ ಒತ್ತಡ ಬೀಳುವ ಡ್ಯಾನ್ಸ್ ನಿಮ್ಮ ಜೀವ ತಗೆಯಬಹುದು ಎಚ್ಚರ ಅಂತಿದ್ದಾರೆ ತಜ್ಞ ವೈದ್ಯರು.

Views: 1
ಜನರ ಜೀವ ಹಿಂಡುವ ಹೆಮ್ಮಾರಿ ಕೊರೊನಾ ಬಂದಾಗಿನಿಂದ ಜನರಿಗೆ ಒಂದಲ್ಲ ಒಂದು ಖಾಯಿಲೆಗಳು ಶುರುವಾಗಿದೆ. ಒಂದಲ್ಲ ಒಂದು ಚಿತ್ರವಿಚಿತ್ರ ಆರೋಗ್ಯ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಕೆಲವರಿಗೆ ಹೃದಯಘಾತ ಸಂಭವಿಸುತ್ತಿದ್ದರೆ, ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಆಯಾಸ ದೈಹಿಕ ಒತ್ತಡವೂ ಯುವಕರಲ್ಲಿ ಹೃದಯಘಾತಕ್ಕೆ ಕಾರಣವಾಗ್ತೀರೊದು ಆತಂಕ್ಕೆ ಕಾರಣವಾಗಿದೆ.
ಗುಜರಾತ್ನಲ್ಲಿ ಗಾರ್ಬಾ ನೃತ್ಯ ಮಾಡುವ ವೇಳೆ 10 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸದ್ಯ ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮೊದಲೇ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು, ಹೃದಯ ಸಮಸ್ಯೆಗಳ ಬಗ್ಗೆ ತಿಳವಳಿಕೆ ಹಾಗೂ ಅವರ ಈ ಹಿಂದಿನ ಹೃದಯಸಂಬಂಧಿ ಸಮಸ್ಯೆಗಳ ಹಿಸ್ಟರಿ ಇಲ್ಲದೇ ಇರುವುದೇ ಹೃದಯಘಾತಕ್ಕೆ ಕಾರಣವಾಗಿದೆ. ಜೊತೆಗೆ ದೀರ್ಘ ಉಪವಾಸ, ಅನಾರೋಗ್ಯಕರ ಆಹಾರ ಹಾಗೆಯೇ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಕುರಿತು ತಿಳಿವಳಿಕೆ ಇಲ್ಲದಿರುವುದೇ ಈ ಸಾವಿಗೆ ಕಾರಣವಾಗಿದೆ. ಗುಜರಾತನಲ್ಲಿ ಗಾರ್ಬ್ ನೃತ್ಯದಿಂದ ಒಂದೇ ದಿನದಲ್ಲಿ 10 ಜನರಲ್ಲಿ ಹೃದಯಘಾತದಿಂದ ಸಾವು ಪ್ರಕರಣ ಹಿನ್ನಲೆ ವೈದ್ಯರು ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೊವಿಡ್ ಬಳಿಕ ರಾಜ್ಯದಲ್ಲಿ ಹೆಚ್ಚಾಗಿ ಹೃದಯಘಾತ ಕಂಡು ಬರ್ತಿದೆ. ಅದರಲ್ಲೂ ಅತಿಯಾದ ದೈಹಿಕ ವ್ಯಾಯಾಮ ಕುಣಿತಾ ಸ್ಟೆಪ್ಸ್ ಯಾವತ್ತು ಡ್ಯಾನ್ಸ್ ಮಾಡದವರು ಅತಿಯಾಗಿ ಕುಣಿತ, ಹಬ್ಬದ ಜೋಶ್ನಲ್ಲಿ ಇತರದ ಚಟುವಟಿಕೆಗಳಲ್ಲಿ ಮುಂದಾಗುವ ವೇಳೆ ಹೃದಯ ಸ್ತಂಭನದ ಸಾಧ್ಯತೆ ಹೆಚ್ಚಾಗಿ ಇರುತ್ತೆ ಎಂದಿದ್ದಾರೆ ಹೃದಯ ತಜ್ಞರು
ಸದ್ಯ ಕಳೆದ 10 ವರ್ಷಗಳಲ್ಲಿ ಯುವ ಸಮುದಾಯದಲ್ಲಿ ಹೃದಯಾಘಾತದ ಪ್ರಮಾಣ ಶೇ.22ರಷ್ಟು ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ, ಹೃದಯ ವೈಫಲ್ಯದಿಂದ ಬಳಲುತ್ತಿರುವ 75% ನಗರಗಳ ಪೈಕಿ 60% ಹೃದಯ ವೈಫಲ್ಯದ ರೋಗಿಗಳು ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಲ್ಲಿ ಸುಮಾರು 50% ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ ಯುವಕರು ಅತಿಯಾದ ದೈಹಿಕ ಒತ್ತಡ ಬೀಳುವ ಡ್ಯಾನ್ಸ್ ಕುಣಿತ ಮಾಡುವ ಮುನ್ನ ಎಚ್ಚರ ಇರಲಿ ಎಂದು ವೈದ್ಯರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಹಿರಿಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಹೃದಯಾಘಾತವು ಈಗ ಯುವಕರು, ಮಕ್ಕಳಲ್ಲಿ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಯುವಕರು ಹೃದಯದ ಆರೋಗ್ಯ ಅಥವಾ ಹಿಸ್ಟರಿ ಅರಿಯದೇ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮುನ್ನ ಎಚ್ಚರ ವಹಿಸಬೇಕಿದೆ.