ಧಾರ್ಮಿಕ

ಗಣೇಶೋತ್ಸವ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶೋತ್ಸವಕ್ಕೆ ಸೆ.18 ರ ಬದಲು ಸೆ.19ರಂದು ರಜೆ ಘೋಷಣಣೆ

Views: 0

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶೋತ್ಸವಕ್ಕೆ ಸೆ.18 ರ ಬದಲು ಸೆ.19ರಂದು ರಜೆ ಘೋಷಣೆ ಮಾಡಲು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದ್ದಾರೆ.

ಈ ಬಾರಿ ಗಣೇಶ ಹಬ್ಬ ಸೆ. 18 ರಂದು ಇದೆ. ಆದರೆ ಪಂಚಾಂಗದ ಪ್ರಕಾರ ಹಬ್ಬವು ಸೆ. 19ರಂದು ಇದೆ.

ಹಾಗಾಗಿ ಕರಾವಳಿಯಲ್ಲಿ ಸೆ. 19ಕ್ಕೆ ಗಣೇಶೋತ್ಸವ ಮಾಡಲು ತೀರ್ಮಾನ ಮಾಡಲಾಗಿದ್ದು, ಸರ್ಕಾರಕ್ಕೆ ಸೆ.19ರಂದು ಸರ್ಕಾರಿ ರಜೆ ನೀಡಲು ಮನವಿ ಮಾಡಲಾಗಿತ್ತು.

ಸರ್ಕಾರಿ ರಜೆ ನೀಡುವಂತೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದ್ದರು.

ಸೆ.19 ರಂದು ರಜೆ ನೀಡಲು ಸೂಚಿಸಿದ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬಕ್ಕೆ ಸೆ. 19ರಂದು ರಜೆ ಇರಲಿದೆ ಎಂದು ತಿಳಿದು ಬಂದಿದೆ.

ರಾಜ್ಯಾದ್ಯಂತ ಸೆ.18ರಂದು ಗಣೇಶ ಚತುರ್ಥಿಗೆ ಸರ್ಕಾರಿ ರಜೆ ಇರಲಿದೆ.ಆದರೆ ದ.ಕ ಜಿಲ್ಲೆಯಲ್ಲಿ ಮಾತ್ರ ಸೆ.19ಕ್ಕೆ ಗಣೇಶ ಚತುರ್ಥಿ ಹಿನ್ನಲೆ ಸರ್ಕಾರಿ ರಜೆ ಕೊಡಲಾಗಿದೆ.

 

Related Articles

Back to top button
error: Content is protected !!