ಒಮಾನ್‌ನಲ್ಲಿ ಹಠಾತ್ ಪ್ರವಾಹ ಕಾರು ಕೊಚ್ಚಿ ಹೋಗಿ ಇಬ್ಬರು ಭಾರತೀಯರು ಸಾವು
Views: 125
ಕನ್ನಡ ಕರಾವಳಿ ಸುದ್ದಿ: ಈದುಲ್ ಫಿತ್ರ್ ಹಬ್ಬದಂದು ಒಮಾನ್‌ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕಾರು ಕೊಚ್ಚಿ ಹೋಗಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಇನ್ನೊಬ್ಬ ಮಹಿಳೆ ನಾಪತ್ತೆಯಾಗಿದ್ದಾರೆ.
ಕೇರಳದ ತ್ರಿಥಾಲ ನಿವಾಸಿಗಳಾದ ಯೂಸುಫ್ ಮತ್ತು ಶಮ್ಲಾ ಮೃತರು. ನಾಪತ್ತೆಯಾಗಿರುವ ಮಹಿಳೆಯನ್ನು ಕೇರಳದ ತ್ರಿಥಾಲಾ ಮೂಲದ ರಮ್ಯಾ ಎಂದು ಗುರುತಿಸಲಾಗಿದೆ.
ಈ ಘಟನೆ ಬೆನ್ನಲ್ಲೆ ಕಾಂಗ್ರೆಸ್ ನಾಯಕ ವಿಡಿ ಸತೀಶನ್ ಪ್ರಧಾನಿ ನರೇಂದ್ರ ಮೋದಿಯವರ ತುರ್ತು ಮಧ್ಯಸ್ಥಿಕೆಯನ್ನು ಕೋರಿದ್ದಾರೆ.
ವರದಿಗಳ ಪ್ರಕಾರ, ಒಮಾನ್ ಅಲ್ ಬನಾ ಗವರ್ನರೇಟ್ ಪ್ರದೇಶದಲ್ಲಿ ಅಕಸ್ಮಿಕವಾಗಿ ಪ್ರವಾಹ ಉಂಟಾಗಿ ಈ ಘಟನೆ ಸಂಭವಿಸಿದೆ. ಸಂತ್ರಸ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮೃತರ ಕುಟುಂಬಗಳಿಗೆ ಬೆಂಬಲ ನೀಡಲು ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುವಂತೆ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.
ಶನಿವಾರ ಸಂಭವಿಸಿದ ಘಟನೆಯ ಬಗ್ಗೆ ಪ್ರಧಾನಿಗೆ ಬರೆದ ಪತ್ರದಲ್ಲಿ ಸತೀಶನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಒಮಾನ್‌ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸತೀಶನ್ ಒತ್ತಾಯಿಸಿದ್ದಾರೆ.






