ರಾಜಕೀಯ

ಶಾಸಕ ಯಶ್ವಾಲ್ ಸುವರ್ಣ V/S ಮಾಜಿ ಶಾಸಕ ರಘುಪತಿ ಭಟ್ “ರೆಸಾರ್ಟ್” ವಾರ್ 

 

Views: 41

ವೈಯಕ್ತಿಕ ದ್ವೇಷದಿಂದ ನನ್ನ ರೆಸಾರ್ಟ್ ನಿರ್ಮಾಣಕ್ಕೆ ಉಡುಪಿ ಶಾಸಕರಿಂದ ಅಡ್ಡಗಾಲು- ಕೆ.ರಘುಪತಿ ಭಟ್ ಆರೋಪ

ಯಶ್ಪಾಲ್ ಗೆ ಮುಂದಿನ ಸಲ ಟಿಕೆಟ್ ಇಲ್ಲ- ನಿಂತರೆ ಸೋಲಿಸುವ ತಾಕತ್ತು ನನ್ನಲ್ಲಿ ಈಗಲೂ ಉಳಿದಿದೆ: ರಘುಪತಿ ಭಟ್ ಗುಡುಗು

ಮಾ.23ರಿಂದ ಪ್ರಾಧಿಕಾರದ ಎದುರು ಮಾಜಿ ಶಾಸಕ ರಘುಪತಿ ಭಟ್‌ರಿಂದ ಧರಣಿ

ಕನ್ನಡ ಕರಾವಳಿ ಸುದ್ದಿ: ಬಡನಿಡಿಯೂರಿನ ಸಮುದ್ರ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದೇ ಇದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶ್ವಾಲ್ ಸುವರ್ಣ ಅವರು ರೆಸಾರ್ಟ್ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಕರಂಬಳ್ಳಿಯ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಿಂತ ಮೊದಲು ನಾನು ಉದ್ಯಮಿ. ರಾಜಕೀಯ ನನ್ನ ವೃತ್ತಿಯಲ್ಲಿ ಪ್ರವೃತ್ತಿ. ಹೋಟೆಲ್ ಉದ್ಯಮ ನಡೆಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದಲ್ಲಿ 1.60 ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಲು ಹೊರಟಿದ್ದೆ. ಅನುಮತಿ ಕೂಡ ಪಡೆದಿದ್ದೆ. ಸಿಂಗಲ್ ಲೇ ಔಟ್ ಗೆ 2 ವರ್ಷಗಳಿಂದ ಅರ್ಜಿ ಹಾಕಿದರೂ ಇವರೆಗೂ ಸಿಕ್ಕಿಲ್ಲ. ಇದಕ್ಕೆ ಹೈಕೋರ್ಟ್ ಮೊರೆ ಹೋದರೂ ಬೇರೆ ಬೇರೆ ಕಾರಣ ನೀಡಿ ನಿರಾಕರಿಸಿದರು. ಆದರೆ ಫೆ. 20 ರಂದು ಸಿಂಗಲ್ ಲೇ ಔಟ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬಂದಿದೆ. ಆದರೆ ಒಂದು ತಿಂಗಳಾದರೂ ಈತನಕ ಅನುಮತಿ ಪತ್ರ ಕೊಡುತ್ತಿಲ್ಲ. ಮೂರು ಬಾರಿ ಶಾಸಕನಾಗಿದ್ದ ಸಮಯದಲ್ಲಿ ಯಾರಿಗೆ ಸಮಸ್ಯೆಯಾದರೂ ಜಾತಿ ಧರ್ಮ ಮರೆತು ಸ್ಪಂದಿಸಿದ್ದೇನೆ. ಆದರೆ ಈಗ ನನಗೆ ಸಮಸ್ಯೆಯಾಗುತ್ತಿದೆ. ಉಡುಪಿ ಶಾಸಕ ಯತ್ಪಾಲ್ ಸುವರ್ಣ ಅವರು ವೈಯಕ್ತಿಕ ದ್ವೇಷಕ್ಕಾಗಿ 24 ತಿಂಗಳಿನಿಂದ ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ದೂರಿದರು.

ಶಾಸಕ ಯಶ್ ಪಾಲ್ ಸುವರ್ಣ ಅವರು ವೈಯಕ್ತಿಕ ದ್ವೇಷದಿಂದ ರೆಸಾರ್ಟ್ ನಿರ್ಮಾಣಕ್ಕೆ ತೊಂದರೆ ಮಾಡುತ್ತಿದ್ದರು ಕೂಡ ಜಿಲ್ಲಾಡಳಿತವು ಸುಮ್ಮನಿದೆ. ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ರೌಡಿಸಂಗೆ ಬೆದರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಾಧಿಕಾರದ ಎದುರು ಪ್ರತಿಭಟನೆ: ಮಾರ್ಚ್ 23 ರಂದು ಬೆಳಗ್ಗೆ 9.30ಗಂಟೆಯಿಂದ ಸಂಜೆ 6 ಗಂಟೆಗೆವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸಾತ್ವಿಕ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ನ್ಯಾಯ ಸಿಗುವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ ಕೆ.ರಘುಪತಿ ಭಟ್, ಸಿಂಗಲ್ ಲೇ ಔಟ್ ಕೊಡಬೇಕು. ಕೊಡುವುದಿಲ್ಲ ಎಂದಾದರೆ ಹಿಂಬರಹ ಆದರೂ ಕೊಡಲಿ. ಹಿಂಬರಹ ಕೊಟ್ಟರೆ ಧರಣಿ ಕೈಬಿಟ್ಟು ಕಾನೂನಿನ ಮೊರೆ ಹೋಗುವುದಾಗಿ ಹೇಳಿದರು.

Related Articles

Back to top button
error: Content is protected !!