ಕುಂದಾಪುರ: ಮಹಿಳೆಯರಿಂದ ಸಾಮೂಹಿಕ ಶಿವ ಸಹಸ್ರನಾಮ ಭಸ್ಮಾರ್ಚನೆ ಪೂಜಾ ಕಾರ್ಯಕ್ರಮ

Views: 1

ಕುಂದಾಪುರ: ಶತ-ಶತಮಾನಗಳ ಇತಿಹಾಸವುಳ್ಳ, ಸಹಸ್ರ-ಸಹಸ್ರ ಭಕ್ತಾದಿಗಳ ಹೃದಯದಲ್ಲಿ ನೆಲೆನಿಂತಿರುವ ಊರಿನ ಅಧಿದೇವರಾದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಕರಾವಳಿ ಭಾಗದಲ್ಲೇ ಪ್ರಥಮ ಬಾರಿಗೆ ವಾಸುದೇವ ಜೋಯಿಸರ ನೇತೃತ್ವದಲ್ಲಿ 1,200ಕ್ಕೂ ಮಿಕ್ಕಿ ಮಹಿಳೆಯರಿಂದ ಸಾಮೂಹಿಕ ಶಿವ ಸಹಸ್ರನಾಮ ಭಸ್ಮಾರ್ಚನೆ ಪೂಜಾ ಕಾರ್ಯಕ್ರಮ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ, ಸಮಾಜ ಸೇವಕರಾದ ಸುಬ್ರಹ್ಮಣ್ಯ ಹೊಳ್ಳ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ ಶೆಟ್ಟಿ, ವಿಶ್ವನಾಥ್ ಪೂಜಾರಿ ಗರಡಿ ಮನೆ, ನಾಗರಾಜ್ ರಾಯಪ್ಪನ ಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಎಚ್, ಸವಿತ ಜಗದೀಶ್ ಹಾಗೂ ಊರಿನ ಪ್ರಮುಖರಾದ ಕಿಶೋರ್ ಹೆಗ್ಡೆ, ಚಂದ್ರಶೇಖರ್ ಕಲ್ಪತರು, ಸಟ್ವಾಡಿ ವಿಜಯ್ ಶೆಟ್ಟಿ, ರಾಜೀವ ಕೋಟ್ಯಾನ್,ಹೃದಯ ಕುಮಾರ್ ಶೆಟ್ಟಿ, ಮಂಜುನಾಥ್ ರಾವ್, ಜಿ ಎಸ್ ಭಟ್, ಸಚಿನ್ ನಕ್ಕತ್ತಾಯ, ಚಂದ್ರಶೇಖರ್ ಶೆಟ್ಟಿ, ಶ್ರವಣ್ ಚಾತ್ರ ಮುಂತಾದ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.






