ಜನಮನ

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಳಿಕ ನನ್ನ ಮುಂದಿನ ನಿರ್ಧಾರ: ಡಿ.ವಿ.ಸದಾನಂದಗೌಡ

Views: 2

‘ನನ್ನ ಮುಂದಿನ ನಿರ್ಧಾರ ಏನು ಎಂದು ಈಗಲೇ ಹೇಳುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆಯೇ ಸುದ್ದಿಗೋಷ್ಠಿ ಮಾಡಿಯೇ ನಾನು ತಿಳಿಸುತ್ತೇನೆ’ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಬಿಜೆಪಿ ಮುಖಂಡ ಡಿ.ವಿ.ಸದಾನಂದಗೌಡ ಕುತೂಹಲದ ಹೇಳಿಕೆ ನೀಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಬಿಜೆಪಿ ನನಗೆ ಎಲ್ಲಾ ನೀಡಿದೆ. ನಾನು ಪಕ್ಷಕ್ಕೆ ಏನು ನೀಡಬೇಕು ಎಂಬುದನ್ನು ನೋಡಬೇಕಿದೆ. ನನಗೂ ಹಳೇ ಮೈಸೂರು ಸೇರಿ ರಾಜ್ಯಾದ್ಯಂತ ಅಭಿಮಾನಿಗಳು, ಹಿತೈಷಿಗಳು ಇದ್ದಾರೆ ಎಂದು ಭಾವಿಸಿದ್ದೇನೆ. ಪಕ್ಷದ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆ ನಾನು ನನ್ನ ನಿರ್ಧಾರ ತಿಳಿಸುವೆ.

ಈಗಲೇ ನಿರ್ಧಾರ ತಿಳಿಸಿ ಪಕ್ಷಕ್ಕೆ ಮುಜುಗರ ಮಾಡುವುದಿಲ್ಲ. ಆ ನಿರ್ಧಾರ ಏನು ಎಂದು ಈಗಲೇ ಹೇಳುವುದಿಲ್ಲ. ಸುದ್ದಿಗೋಷ್ಠಿ ಮಾಡಿಯೇ ತಿಳಿಸುತ್ತೇನೆ’ ಎಂದು ಸದಾನಂದಗೌಡ ಮಾರ್ಮಿಕವಾಗಿ ಹೇಳಿದರು. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ತಮ್ಮ ಸ್ಥಾನವನ್ನು ಗುಪ್ತವಾಗಿಟ್ಟರು.

Related Articles

Back to top button
error: Content is protected !!