ಜನಮನ

ಲೈಂಗಿಕ ಕಿರುಕುಳ ಆರೋಪ; ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಂಧನ

Views: 0

ಗುವಾಹಟಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳಾ ಸಹ-ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಆತನನ್ನು ಗುವಾಹಟಿ ಪೊಲೀಸರು ಸದ್ಯ ಬಂಧಿಸಿದ್ದಾರೆ.

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕನನ್ನು ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಏರ್‌ಲೈನ್ಸ್ ಭಾನುವಾರ (ಸೆ.10) ಮಾಹಿತಿ ನೀಡಿದೆ. ತಡರಾತ್ರಿ ವಿಮಾನದಲ್ಲಿ ಕ್ಯಾಬಿನ್ ಲೈಟ್​ಗಳು ಆಫ್​ ಆದ ನಂತರದಲ್ಲಿ ಮಹಿಳೆ ಕುಳಿತ್ತಿದ್ದ ಸೀಟಿನ ಆರ್ಮ್‌ರೆಸ್ಟ್ ಅನ್ನು ವ್ಯಕ್ತಿ ಮೇಲಕ್ಕೆ ಎತ್ತಿದ್ದಾನೆ ಎಂದು ಮಹಿಳಾ ಪ್ರಯಾಣಿಕರು ದೂರಿನಲ್ಲಿ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ವ್ಯಕ್ತಿಯ ವಿರುದ್ಧ ಸದ್ಯ ಎಫ್‌ಐಆರ್ ದಾಖಲಿಸಲಾಗಿದೆ. “ದೂರುದಾರರಿಂದ ಸ್ಥಳೀಯ ಪೊಲೀಸರಿಗೆ ಎಫ್‌ಐಆರ್ ರಿಜಿಸ್ಟರ್​ ಆಗಿದೆ ಮತ್ತು ಅಗತ್ಯವಿರುವಲ್ಲಿ ನಾವು ಅವರ ತನಿಖೆಗೆ ನೆರವು ನೀಡುತ್ತೇವೆ” ಎಂದು ಏರ್‌ಲೈನ್ ಅಧಿಕೃತವಾಗಿ ತಿಳಿಸಿದೆ

ನಾನು ನಿದ್ರಿಸಿದ್ದ ವೇಳೆ ನನ್ನ ಸೀಟಿನ ಆರ್ಮ್‌ರೆಸ್ಟ್ ಅನ್ನು ಮೇಲಕ್ಕೆತ್ತಿದ ವ್ಯಕ್ತಿ, ನಿಧಾನವಾಗಿ ಪಕ್ಕಕ್ಕೆ ಬರುತ್ತಿರುವುದನ್ನು ಕಂಡು ನಾನು ಎಚ್ಚರಗೊಂಡೆ” ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಈ ಘಟೆನಯ ಬಗ್ಗೆ ಮಾಹಿತಿ ಪಡೆದ ಕ್ಯಾಬಿನ್ ಸಿಬ್ಬಂದಿ, ವಿಮಾನ ಗುವಾಹಟಿಯಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Related Articles

Back to top button
error: Content is protected !!