ಸಾಮಾಜಿಕ

ಚಿಕ್ಕಬಳ್ಳಾಪುರ: 30ರ ಯುವತಿಗೆಯೊಂದಿಗೆ 65ರ ವರನೊಂದಿಗೆ ಮದ್ವೆ 

Views: 0

ಚಿಕ್ಕಬಳ್ಳಾಪುರ: ಪ್ರೀತಿಗೆ ಯಾವುದೇ ಗಡಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಅದರಂತೆ ವಯಸ್ಸಿನ ಗಡಿಯೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರದಲ್ಲಿ 65 ವರ್ಷದ ವರ 30 ವರ್ಷದ ಯುವತಿಯನ್ನು ಮದುವೆಯಾಗಿರುವುದು ವರದಿಯಾಗಿದೆ.

ಅಪರೂಪದ ಜೋಡಿ ಜಿಲ್ಲೆಯ ಶಿಡ್ಲಘಟ್ಟದ ಅಪ್ಪೇಗೌಡನಹಳ್ಳಿ ಗೇಟ್‍ನ ಬಯಲಾಂಜನೇಯ ಸ್ವಾಮಿ ದೇವಾಲಯದ ಬಳಿ ಮದುವೆಯಾಗಿದ್ದಾರೆ. ಈರಣ್ಣ ಹಾಗೂ ಅನು ಮದುವೆಯಾಗಿರುವ ನವ ದಂಪತಿಯಾಗಿದ್ದಾರೆ.

ಆರು ತಿಂಗಳ ಹಿಂದೆ ಈರಣ್ಣ ಅವರ ಪತ್ನಿ ತೀರಿಕೊಂಡಿದ್ದರು. ಇದರಿಂದ ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಅವರು ಮರು ಮದುವೆಯಾಗಿದ್ದಾರೆ. ವಿಶೇಷ ದಂಪತಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

Related Articles

Back to top button
error: Content is protected !!