ಜನಮನ

ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡುವ ಗಡುವು ವಿಸ್ತರಣೆ; ಆನ್​ಲೈನ್​ನಲ್ಲಿ ಹೇಗೆ ಮಾಡುವುದು? ಇಲ್ಲಿದೆ ವಿವರ ‘ಕನ್ನಡ ಕರಾವಳಿ’ 

Views: 120

ಆಧಾರ್ ಕಾರ್ಡ್​ನಲ್ಲಿ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ ಮಾಡಲು ಜೂನ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಇದನ್ನು 3 ತಿಂಗಳು ಹೆಚ್ಚಿಸಲಾಗಿದೆ. 2023 ಸೆಪ್ಟಂಬರ್ 14ರವರೆಗೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ಅವಕಾಶ ಇದೆ. ಬಹಳ ಜನರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಿಂದಿನದ್ದಾದರೂ ಒಮ್ಮೆಯೂ ಅಪ್​ಡೇಟ್ ಮಾಡಿಲ್ಲ. ಈ ರೀತಿ 10 ವರ್ಷದಿಂದ ಯಥಾಸ್ಥಿತಿಯಲ್ಲಿ ಇರುವ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ಆಗಾಗ್ಗೆ ಮನವಿ ಮಾಡುತ್ತಿದೆ. ಆಧಾರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೀವು ಅಪ್​ಡೇಟ್ ಮಾಡಬಹುದು. ಇದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಇದರ ಜೊತೆಗೆ, ಆನ್​ಲೈನ್​ನಲ್ಲಿ ನೀವೇ ಸ್ವತಃ ಅಪ್ಡೇಶನ್ ಮಾಡಲು ಸಾಧ್ಯ. ಆನ್​ಲೈನ್​ನಲ್ಲಿ ಸದ್ಯ ಉಚಿತವಾಗಿ ಈ ಸೇವೆ ಲಭ್ಯ ಇದೆ. ಸೆಪ್ಟಂಬರ್ 14ರ ಬಳಿಕ ಆನ್​ಲೈನ್​ನಲ್ಲೂ ಶುಲ್ಕ ಪಾವತಿಸಿ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.

ಡೆಮೋಗ್ರಾಫಿಕ್ ಮಾಹಿತಿಯ ನಿಖರತೆ ಕಾಪಾಡಲು ದಯವಿಟ್ಟು ಆಧಾರ್ ಅಪ್​ಡೇಟ್ ಮಾಡಿ ಎಂದು ಯುಐಡಿಎಐ ಕರೆ ನೀಡಿದೆ. ಯುಐಡಿಎಐನ ಮೈ ಆಧಾರ್ ಪೋರ್ಟಲ್ ಮೂಲಕ ಸುಲಭವಾಗಿ ನಿಮ್ಮ ಆಧಾರ್ ಅಪ್​ಡೇಟ್ ಸಾಧ್ಯವಾಗುತ್ತದೆ. ಇಲ್ಲಿ ನಿಮಗೆ ಗೊಂದಲ ಅಥವಾ ಕಷ್ಟ ಎನಿಸಿದರೆ ಆಧಾರ್ ಸೆಂಟರ್​ಗೆ ಹೋಗಿ 25 ರೂ ಶುಲ್ಕ ನೀಡಿ ಈ ಕಾರ್ಯ ಮಾಡಿಸಬಹುದು.

Related Articles

Back to top button
error: Content is protected !!