ಜನಮನ

ಜಾಲಿ ರೈಡ್ ಗೆ  ಬಂದ ಸವಾರರಿಬ್ಬರ ಮೇಲೆ ಕಾರು ಹರಿದು ದಾರುಣ ಅಂತ್ಯ 

Views: 0

ಜಾಲಿ ರೈಡ್ ಗೆ ಕೇರಳದಿಂದ ಬಂದಿದ್ದ ಬೈಕ್ ಸವಾರರಿಬ್ಬರು ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 54ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇಬ್ಬರು ಸವಾರಿ ಮಾಡುತ್ತಿದ್ದ ಹಿಮಾಲಯನ್ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ ಆಯ್ತು, ಈ ಸಂದರ್ಭದಲ್ಲಿ ಇಬ್ಬರು ರಸ್ತೆಗೆ ಬಿದ್ದಿದ್ದು,ಇದೇ ಮಾರ್ಗದಲ್ಲಿ ವೇಗವಾಗಿ ಸಾಗಿ ಬಂದ ಕಾರು ಇಬ್ಬರ ತಲೆಯ ಮೇಲೆ ಹರಿದು ದಾರುಣ ಅಂತ್ಯ ಕಂಡಿದ್ದಾರೆ.

ಘಟನೆಯಲ್ಲಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!