ಜನಮನ

ಭೀಕರ ರಸ್ತೆ ಅಪಘಾತ, ಇಬ್ಬರು ಮೃತ್ಯು, 7 ಮಂದಿಗೆ ಗಾಯ 

Views: 0

ಹೊಳೆಹೊನ್ನೂರು: ಸಮೀಪದ ಜಾವಳ್ಳಿ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ವರು ಮೃತಪಟ್ಟು ಎರಡೂ ಕಾರಿನಲ್ಲಿದ್ದ ಒಟ್ಟು 7 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಮೃತರನ್ನು ಶಿವಮೊಗ್ಗದ ಇಲಿಯಾಜ್ ನಗರದ ವಾಸಿ ಅಪ್ತಾಬ್ (35)ಮತ್ತು ಅವರ ಸೊಸೆ ಮದಿಹಾ (13) ಎಂದು ಗುರುತಿಸಲಾಗಿದೆ.

ಘಟನೆಯಿಂದ ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದಿಂದ ಚನ್ನಗಿರಿ ಕಡೆ ಕಾರಿನಲ್ಲಿ ಹೊರಟಿದ್ದ ಇಲಿಯಾಜ್ ನಗರದ ನಿವಾಸಿಗಳಿಗೆ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ‌ ಕಾರು ಡಿಕ್ಕಿ ಹೊಡೆದಿದೆ.

ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button
error: Content is protected !!