ಪೆಟ್ರೋಲ್ ದರ : $90ರ ಗಡಿದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್-ಡೀಸೆಲ್ ದರ ಏರಿಕೆ!
ಹೈಲೈಟ್ಸ್: ಕಚ್ಚಾ ತೈಲದ ಬೆಲೆ ಬುಧವಾರ ಮತ್ತಷ್ಟು ಜಿಗಿತ, ದೇಶದ ವಿವಿಧ ನಗರಗಳಲ್ಲಿ ಇಂಧನ ದರ ಬದಲಾವಣೆ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 89.62 ರೂ.ಗೆ ಮಾರಾಟ ಮಹಾನಗರಗಳಲ್ಲಿ ಇಂಧನ ಬೆಲೆ ಸ್ಥಿರಗೊಂಡಿದ್ದು, ಇತರೆ ಕೆಲವು ನಗರಗಳಲ್ಲಿ ಬೆಲೆ ಜಿಗಿತಗೊಂಡಿದೆ

Views: 0
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬುಧವಾರ ಕೂಡ ಹೆಚ್ಚಾಗಿದ್ದು ಈಗಾಗಲೇ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ $90 ರ ಗಡಿದಾಟಿದೆ. ಬ್ರೆಂಟ್ ಅಷ್ಟೇ ಅಲ್ಲದೆ ಡಬ್ಲ್ಯೂಟಿಐ ಕಚ್ಚಾ ತೈಲ ಕೂಡ ದುಬಾರಿಯಾಗಿದ್ದು, ದೇಶದ ವಿವಿಧ ನಗರಗಳಲ್ಲಿ ಬುಧವಾರ ಪ್ರತಿ ಲೀಟರ್ ಪೆಟ್ರೋಲ್-ಡೀಸೆಲ್ ದರ ವ್ಯತ್ಯಾಸಗೊಂಡಿದೆ. ಆದ್ರೆ ದೆಹಲಿ ಸೇರಿದಂತೆ ಭಾರತದ ನಾಲ್ಕು ಮಹಾನಗರಗಳಲ್ಲಿ ಇಂಧನ ಬೆಲೆ ಸ್ಥಿರವಾಗಿದೆ.
ಬುಧವಾರ ಭಾರತದ ಸರ್ಕಾರಿ ತೈಲ ಕಂಪನಿಗಳು ಎಂದಿನಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಹಲವು ನಗರಗಳಲ್ಲಿ ಇಂಧನ ದರ ಏರಿಕೆಯಾಗಿದೆ. ಕೆಲವೆಡೆ ಬೆಲೆಯಲ್ಲಿಯೂ ಇಳಿಕೆಯಾಗಿದೆ. ನಾಲ್ಕು ಮಹಾನಗರಗಳ ಬಗ್ಗೆ ನೋಡಿದ್ರೆ, ಇಲ್ಲಿ ಬೆಲೆಗಳು ಸ್ಥಿರವಾಗಿವೆ.
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.31 ಮತ್ತು ಡೀಸೆಲ್ 94.27 ರೂ.ಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ 94.24 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.03 ಮತ್ತು ಡೀಸೆಲ್ 92.76 ರೂ.ಗೆ ಮಾರಾಟವಾಗುತ್ತಿದೆ.






