ಸಹೋದರಿಯರ ಮೇಲೆ ಗ್ಯಾಂಗ್ ರೇಪ್, ಬಿಜೆಪಿ ನಾಯಕನ ಪುತ್ರ ಸೇರಿ 10 ಮಂದಿ ಆರೆಸ್ಟ್!

Views: 0
ರಕ್ಷಾ ಬಂಧನ ಹಬ್ಬದ ದಿನ ಘನಘೋರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬಸ್ಥರ ಮನೆಗೆ ತೆರಳಿ ರಕ್ಷಾ ಬಂಧನ ಆಚರಿಸಿ ಮರಳುತ್ತಿದ್ದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ಚತ್ತೀಸಘಡದ ರಾಯ್ಪುರದಲ್ಲಿ ನಡೆದಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಬಿಜೆಪಿ ನಾಯಕನ ಪುತ್ರ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.
ಇಬ್ಬರು ಸಹೋದರಿಯರು ಸಂಬಂಧಿಕರ ಮನೆಗೆ ತೆರಳಿ ರಾಖಿ ಹಬ್ಬ ಆಚರಿಸಿದ್ದರು. ಸಂಜೆ ವೇಳೆ ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದ ವೇಳೆ ಮೂವರು ಕಾಮುಕರ ಈ ಸಹೋದರಿಯರನ್ನು ಅಡ್ಡಗಟ್ಟಿ ಮೊಬೈಲ್ ಫೋನ್, ಪರ್ಸ್ ವಶಕ್ಕೆ ಪಡೆದಿದ್ದಾರೆ. ಬಳಿಕ ರಸ್ತೆಯಲ್ಲಿ ಅಡ್ಡ ನಿಂತು ಕಿರುಕುಳ ನೀಡಲು ಆಗಮಿಸಿದ್ದಾರೆ. ಇದೇ ವೇಳೆ ಬೈಕ್ ಮೂಲಕ ಮತ್ತೆ 7 ಮಂದಿ ಸ್ಥಳಕ್ಕೆ ಆಗಮಿದ್ದಾರೆ.
ಇಬ್ಬರು ಸಹೋದರಿಯರನ್ನು ಹಿಡಿದು ನಿರ್ಜನ ಪ್ರದೇಶಕ್ಕೆ ಒಯ್ದು ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ.
ಅತ್ಯಾಚಾರ ಹಾಗೂ ಹಲ್ಲೆಯಿಂದ ತೀವ್ರ ನರಳಿದ ಸಹದೋರಿಯರು ಮನೆಗೆ ಮರಳಿ ನಡೆದ ಘಟನೆ ವಿವರಿಸಿದ್ದಾರೆ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಬಿಜೆಪಿ ಮುಖಂಡನ ಪುತ್ರ ಸೇರಿದಂತೆ 10 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಆಗಸ್ಟ್ ತಿಂಗಳಲ್ಲಿ ಜಾಮೀನಿನ ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಜೈಲು ಸೇರಿದ್ದಾನೆ. ಇತ್ತ ಇಬ್ಬರು ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚತ್ತೀಸಘಡದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡನ ಪುತ್ರ ಈ ಪ್ರಕರಣದಲ್ಲಿ ಅರೆಸ್ಟ್ ಆಗಿರುವುದು ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ.






