ಕೋಟೇಶ್ವರದಲ್ಲಿ ಮಹಿಳೆಯ ಸರ ಕದ್ದು ಓಡುತ್ತಿರುವ ಕಳ್ಳನನ್ನು ಹಿಡಿದ ಸ್ಥಳೀಯರು

Views: 0
ಕುಂದಾಪುರ: ಕೋಟೇಶ್ವರ ಪೇಟೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯ ಕೊರಳಿನಲ್ಲಿದ್ದ ಸರವನ್ನು ಕದ್ದು ಪರಾರಿಯಾಗುತ್ತಿರುವ ವೇಳೆ ಆತನನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಕುಂಭಾಶಿಯ ಮಹಿಳೆಯೊಬ್ಬರು ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ವೇಳೆ ನಿರ್ಜನ ಪ್ರದೇಶದ ಓಣಿಯಲ್ಲಿ ಮಹಿಳೆಯನ್ನು ದೂಡಿಹಾಕಿ ಕೊರಳಿನಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿ ಆಗುತ್ತಿರುವ ವೇಳೆ ಸ್ಥಳೀಯರೇ ಕಳ್ಳನನ್ನು ಹಿಡಿದು ತರಾಟೆಗೆ ತೆಗೆದುಕೊಂಡರು.ಎನ್ ಆರ್ ಆಚಾರ್ಯ ಆಸ್ಪತ್ರೆಯ ಓಣಿಯಿಂದ ಜನನಿಬಿಡ ಪ್ರದೇಶದಲ್ಲಿ ಓಡುತ್ತಿರುವ ಕಳ್ಳನನ್ನು ಮೀನು ಮಾರ್ಕೆಟ್ ಹತ್ತಿರ ಹಿಡಿದ ಸ್ಥಳೀಯರು ಮಹಿಳೆಗೆ ಕ್ಷಮೆ ಕೇಳಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಎನ್ ಆರ್ ಆಚಾರ್ಯ ಆಸ್ಪತ್ರೆಯ ಓಣೆಯಲ್ಲಿ ಬಿದ್ದು ನರಳುತ್ತಿರುವ ಮಹಿಳೆಯನ್ನು ಡ್ಯೂಟಿ ಮುಗಿಸಿ ಬರುತ್ತಿರುವ ನರ್ಸ್ ಗಳು ವಿಚಾರಿಸಿದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಎಲ್ಲರೂ ಕಾರ್ಯಪ್ರವರ್ತರಾಗಿ ಕಳ್ಳನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.
ಕಳ್ಳನನ್ನು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.






