ಜನಮನ

ಕಂದಕಕ್ಕೆ ಹಾರಿ ಯುವಕ ಆತ್ಮಹತ್ಯೆ ಜೊತೆಗಿದ್ದ ಯುವತಿ ಪರಾರಿ

Views: 20

ವಿಜಯಪುರ ನಗರದ ಐತಿಹಾಸಿಕ ಗಗನಮಹಲ್ ಆಳವಾದ ಕಂದಕದಲ್ಲಿ ಬಿದ್ದು ಸುಮಾರು 25 ವರ್ಷದ ಅಪರಿಚಿತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.

ಬೆಳಿಗ್ಗೆ ಐತಿಹಾಸಿಕ ಗಗನ ಮಹಲ್ ಕಂದಕದ ಬಳಿ ಬಂದ ಯುವಕ ಅಂಗಿ ಬಿಚ್ಚಿ ನೋಡ ನೋಡುತ್ತಿದ್ದಂತೆ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಲಗುಂಬಜ ಠಾಣೆ ಪೊಲೀಸರು, ಅಗ್ನಿಶಾಮಕ ಸೇವಾ ಸಿಬ್ಬಂದಿ ನೆರವಿನೊಂದಿಗೆ ಸತತ ಮೂರು ಗಂಟೆ ಶೋಧದ ಬಳಿಕ ಶವವನ್ನು ಹೊರ ತೆಗೆದಿದ್ದಾರೆ.

ಸ್ಥಳೀಯರ ಪ್ರಕಾರ ಯುವಕ ಹಾಗೂ ಯುವತಿಯೊಂದಿಗೆ ಗಗನಮಹಲ್ ಕಂದಕದ ಬಳಿಗೆ ಬಂದಿದ್ದರು. ಇಬ್ಬರೂ ಕಂದಕಕ್ಕೆ ಹಾರಲು ಯೋಜಿಸಿದ್ದು, ಆಳ ನೀರಿರುವ ಕಂದಕಕ್ಕೆ ಯುವಕ ಹಾರುತ್ತಲೇ ಯುವತಿ ಪರಾರಿಯಾಗಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು, ವಿಳಾಸ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ನಡೆಸಿದ ನಂತರವೇ ತಿಳಿಯಲಿದೆ.

Related Articles

Back to top button
error: Content is protected !!