ಜನಮನ

ಚಲಿಸುತ್ತಿರುವ ಬಸ್ಸಿನಿಂದ ಹೊರಗೆ ಬಿದ್ದು ಕಂಡಕ್ಟರ್ ಸಾವು

Views: 0

ಮಂಗಳೂರು ನಗರದ ಸಿಟಿಬಸ್ ಕಂಡಕ್ಟರ್ ಈರಯ್ಯ(23) ಎಂಬವರು ಬಸ್ಸಿನ ಮುಂಭಾಗದ ಬಾಗಿಲಿನಿಂದ ಹೊರಗೆ ಬಿದ್ದು ಸಾವನ್ನಪ್ಪಿದ ಘಟನೆ ನಂತೂರು ತಿರುವಿನಲ್ಲಿ ನಡೆದಿದೆ.

ಮಧ್ಯಾಹ್ನ ನಗರ ಸಾರಿಗೆ ಬಸ್ಸು ಪದುವದಿಂದ ಶಿವಭಾಗ್ ಕಡೆ ಹೋಗುವ ಸಂದರ್ಭ ನಂತೂರು ವೃತ್ತ ಬಳಿ ಈ ಅವಘಡ ಸಂಭವಿಸಿದೆ.

ಬಸ್ಸಿನ ಎದುರು ಬಾಗಿಲ ಬಳಿ ನಿಂತಿದ್ದ ಇವರು ಬಸ್ಸು ಚಾಲಕನ ಅತಿಯಾದ ವೇಗದಿಂದ ಚಲಿಸುತ್ತಿದ್ದಾಗ ಆಯ ತಪ್ಪಿ ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.

ಮಂಗಳಾದೇವಿಯಿಂದ ಕಾಟಿಪಳ್ಳಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಇವರು ಸೇವೆ ಸಲ್ಲಿಸುತ್ತಿದ್ದರು.

ಇವರು ಬಿದ್ದ ಕೂಡಲೇ ಅಲ್ಲೇ ಇದ್ದ ಸಂಚಾರಿ ಪೊಲೀಸರು, ಸ್ಥಳೀಯರು ಇವರನ್ನು ಆಸ್ಪತ್ರೆಗೆ ಕರೆದಕೊಂಡು ಹೋಗಿದ್ದಾರೆ. ಆದರೂ ಚಿಕಿತ್ಸೆ ಫಲಿಸದೇ ಇವರು ಸಾವನ್ನಪ್ಪಿದ್ದಾರೆ.

Related Articles

Back to top button
error: Content is protected !!