ಜನಮನ

ಬೈಂದೂರು ಮೀನುಗಾರಿಕೆಗೆ ತೆರಳಿದ ಇಬ್ಬರು ಸಮುದ್ರ ಪಾಲು

Views: 0

ಬೈಂದೂರು: ಕೈರಂಪಣಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಸಮುದ್ರದಲ್ಲಿ ಮುಳುಗಿ ಕಾಣೆಯಾದ ಘಟನೆ ರವಿವಾರ ಸಂಜೆ ಶಿರೂರು ಅಳ್ವೆಗದ್ದೆಯಲ್ಲಿ ಸಂಭವಿಸಿದೆ.

ಮೀನುಗಾರಿಕೆಯಿಂದ ಜೀವನ ನಡೆಸುತ್ತಿರುವ ಇಬ್ಬರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ರವಿವಾರ ಸಂಜೆ ಸಮುದ್ರದಲ್ಲಿ ಸ್ವಲ್ಪ ದೂರ ಸಾಗಿ ಬಲೆ ಬೀಸಿ ಮೀನು ಹಿಡಿಯುವ ವೇಳೆ ಇಬ್ಬರು ಆಯತಪ್ಪಿ ಸಮುದ್ರ ಪಾಲಾಗಿದ್ದಾರೆ. ತತ್ ಕ್ಷಣ ಸ್ಥಳೀಯ ಮೀನುಗಾರರು ಶೋಧಕಾರ್ಯ ಪ್ರಯತ್ನಿಸಿದರೂ ಪತ್ತೆಯಾಗಿಲ್ಲ.

ನಿರುಪಾಲಾದವರು ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಮುಸಾಬ್ (22) ಮತ್ತು ನಝಾನ್( 24) ಮೃತ ಪಟ್ಟವರು.

ಮೃತ ನಝಾನ್ ದುಬಾಯಿಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಉದ್ಯೂಗಿಯಾಗಿದ್ದರು. 15 ದಿನಗಳ ಹಿಂದೆ ಊರಿಗೆ ಬಂದಿದ್ದರು.ಮಸಾಬ್ ಕಳೆದ ವಾರವಷ್ಟೇ ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ಎಸ್ ಐ ನಿರಂಜನ್ ಗೌಡ, ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ, ತಹಶೀಲ್ದಾರರು ಹಾಗೂ ಸ್ಥಳೀಯ ಮೀನುಗಾರ ಮುಖಂಡರು ಹಾಜರಿದ್ದರು.

Related Articles

Back to top button
error: Content is protected !!