ಇತರೆ

ಬೈಂದೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಎಮ್‌ಸಿಸಿ ಬ್ಯಾಂಕ್‌ ಸಾಲ ಪಡೆದು ಲಕ್ಷಾಂತರ ರೂ.ವಂಚನೆ 

Views: 31

ಕನ್ನಡ ಕರಾವಳಿ ಸುದ್ದಿ: ಬೈಂದೂರು ಯಡ್ತರೆಯಲ್ಲಿರುವ ಎಂಸಿಸಿ ಬ್ಯಾಂಕ್‌ನ ಶಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

ಶಿರೂರಿನ ಸಮೀರನ್ ಶೇಖ್ ಎಂಬವರು ಜಾಮೀನುದಾರ ಅಸ್ನಾ ಶೇಖ್ ಎಂಬವರೊಂದಿಗೆ ಜು.11ರಂದು ಬ್ಯಾಂಕಿಗೆ ಬಂದು ಹೊಸ ಕಾರು ಖರೀದಿಸಲು 2,75,000ರೂ. ಸಾಲ ಪಡೆದುಕೊಂಡಿದ್ದರು. ನಂತರ ಬ್ಯಾಂಕ್ ನಿಂದ ಸಾಲಕ್ಕೆ ಸಂಬಂಧಿಸಿದ ದಾಖಲೆಗಳ ನೈಜತೆಯ ಪರಿಶೀಸಿದಾಗ ನಕಲಿ ಎಂಬುದು ಕಂಡುಬಂತು. ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿರುವುದಾಗಿ ದೂರಲಾಗಿದೆ.

ಸೆ.22ರಂದು ಗಂಗೊಳ್ಳಿ ಖಾರ್ವಿಕೇರಿಯ ಮಹಮದ್ ಹುಸೈನ್ ಅಜುಮುದ್ದೀನ್ ಜಾಮೀನುದಾರರಾದ ಸಾನಾಬಿ ಜೊತೆ ಬ್ಯಾಂಕಿಗೆ ಬಂದು, ಕಾರು ಖರೀದಿಸಲು 33,49,000ರೂ. ಸಾಲವನ್ನು ಪಡೆದಿದ್ದರು. ಬಳಿಕ ವಾಹನದ ದಾಖಲೆಯ ಕುರಿತು ಪರಿಶೀಲಿಸಿದಾಗ ವಾಹನದ ಸಂಖ್ಯೆಯು ನಕಲಿಯಾಗಿದ್ದು ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ವಂಚಿಸಿರುವುದು ದೂರಲಾಗಿದೆ.

ಅದೇ ರೀತಿ ಜು.15ರಂದು ಸಿದ್ಧಾಪುರ ಗ್ರಾಮದ ಹೊಸಂಗಡಿಯ ಮಹಮದ್ ಸಲೀಂ ಜಾಮೀನುದಾರ ಅಲ್ ಶಕೀರಾ ಜೊತೆ ಬ್ಯಾಂಕಿಗೆ ಬಂದು, ಕಾರು ಖರೀದಿಸಲು 26,00,000ರೂ. ಸಾಲ ಪಡೆದುಕೊಂಡಿದ್ದರು. ನಂತರ ದಾಖಲೆಗಳನ್ನು ಪರಿಶೀಲಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂಬುದು ಕಂಡುಬಂದಿದೆ. ಆರೋಪಿಗಳು ನಕಲಿ ದಾಖಲೆಗಳನ್ನು ಹಾಜರು ಪಡಿಸಿ ಬ್ಯಾಂಕ್‌ಗೆ ವಂಚಿಸಿರುವುದಾಗಿ ದೂರಲಾಗಿದೆ.

Related Articles

Back to top button
error: Content is protected !!