ಆರೋಗ್ಯ
ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ ಸಿಮ್ಯುಲೇಶನ್ ಟ್ರೈನಿಂಗ್ ಕಾರ್ಯಕ್ರಮ
Views: 41
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ ಸಿಮ್ಯುಲೇಶನ್ ಟ್ರೈನಿಂಗ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ನೈಜ ರೋಗಿಗಳ ಮೇಲೆ ನೇರವಾಗಿ ಪ್ರಯೋಗಿಸುವ ಮೊದಲು ಕೃತಕ ಅಥವಾ ತಂತ್ರಜ್ಞಾನ ಆಧಾರಿತ ನಿಯಂತ್ರಿಕ ವಾತಾವರಣದಲ್ಲಿ ವೈದ್ಯಕೀಯ ಸನ್ನಿವೇಶಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ಬೋಧನಾ ಕಾರ್ಯಕ್ರಮದಲ್ಲಿ ರೋಗಿಯಂತೆ ಉಸಿರಾಡುವ, ಮಾತನಾಡುವ ಮತ್ತು ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ.
ಉದ್ಯಮಿ ನವೀನ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಇದರ ಅಧ್ಯಕ್ಷರಾದ ಡಾ.ತಾರಾನಾಥ್ ಶೆಟ್ಟಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸ್ಮಿತಾ ಮೋಲ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳು ತರಬೇತಿಯ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.









