ಬೆಂಗಳೂರು-ಕಾರವಾರ-ಮಡಗಾಂವ್ ವಂದೇ ಭಾರತ್ ರೈಲು ಸೇವೆಗೆ ಅನುಮೋದನೆ, ಎಲ್ಲೆಲ್ಲಿ ನಿಲುಗಡೆ?
Views: 115
ಕನ್ನಡ ಕರಾವಳಿ ಸುದ್ದಿ: ಯಶವಂತಪುರ ಮಡಗಾಂವ್ ನಡುವೆ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ.
ಹೊಸ ರೈಲು ಸೇವೆಯಿಂದ ಕರ್ನಾಟಕದ ಕರಾವಳಿ ಭಾಗ, ಗೋವಾ ಮತ್ತು ಬೆಂಗಳೂರಿನ ನಡುವಿನ ಪ್ರಯಾಣಿಕರಿಗೆ ಅನುಕೂಲ ಆಗಲಿದೆ
ರೈಲ್ವೇ ಇಲಾಖೆಯ ಆದೇಶದ ಪ್ರಕಾರ, 26655/26656 ಸಂಖ್ಯೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಯಶವಂತಪುರದಿಂದ ಹೊರಡುವ ರೈಲು ಬುಧವಾರ ಸಂಚರಿಸುವುದಿಲ್ಲ. ಮಡಗಾಂವ್ನಿಂದ ಹೊರಡುವ ರೈಲು ಗುರುವಾರ ಸಂಚರಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ನಿಲುಗಡೆ: ಈ ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ತೋಕೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್, ಕಾರವಾರ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
26655 ಸಂಖ್ಯೆಯ ರೈಲು ಬೆಳಗ್ಗೆ 7.35 ಯಶವಂತಪುರದಿಂದ ಹೊರಟು, ಅದೇ ದಿನ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಮಂಗಳೂರು ಜಂಕ್ಷನ್ಗೆ ಅಪರಾಹ್ನ : 3.05ಕ್ಕೆ ಬರಲಿರುವ ರೈಲು ತೋಕೂರು ಜಿ (ಮಂಗಳೂರು)ನಿಂದ 3.45ಕ್ಕೆ ಹೊರಡಲಿದೆ. ಅಪರಾಹ್ನ 26656 ಸಂಖ್ಯೆಯ ರೈಲು ಬೆಳಗ್ಗೆ 8.20ಕ್ಕೆ ಮಡಗಾಂವ್ನಿಂದ ಹೊರಟು, ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಮಧ್ಯಾಹ್ನ 12.18ಕ್ಕೆ ಮಂಗಳೂರು ಜಂಕ್ಷನ್ಗೆ ಬರಲಿರುವ ರೈಲು ತೋಕೂರು (ಮಂಗಳೂರು)ನಿಂದ ಅಪರಾಹ್ನ 1.20ಕ್ಕೆ ಹೊರಡಲಿದೆ.






