ಜನಮನ
ಶಿವಮೊಗ್ಗದಲ್ಲಿ ಡ್ರಾಪ್ ಕೇಳಿದ ಮಂಗಳಮುಖಿಯಿಂದ ರಾಬರಿ

Views: 0
ನಡುರಾತ್ರಿ ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತಿದ ಮಂಗಳಮುಖಿಯೊಬ್ಬಳು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಾಳೆ.
ಶಿವಮೊಗ್ಗ ಎಂ.ಟಿ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯೊಬ್ಬಳು ಕೈ ತೋರಿಸಿ ಕಾರು ಹತ್ತಿಸಿಕೊಂಡಿದ್ದಾಳೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ಚಾಕು ತೆಗೆದು ವ್ಯಕ್ತಿಗೆ ಬೆದರಿಕೆ ಹಾಕಿದ್ದಾಳೆ.
ಕೊರಳಲ್ಲಿ 92,000 ರೂ.ಮೌಲ್ಯದ 23 ಗ್ರಾಂ ತೂಕದ ಚಿನ್ನದ ಸರ ಕಸಿದು ಕಾರಿನ ಡೋರ್ ತೆಗೆದು ಪರಾರಿಯಾಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ರವಿ ಅಲಿಯಾಸ್ ಸ್ವೀಟಿ ಎಂಬ ಮಂಗಳಮುಖಿಯನ್ನು ಬಂಧಿಸಿದ್ದಾರೆ. ಆಕೆ ಬಳಿ ಇದ್ದ 92,000 ರೂ.ಮೌಲ್ಯದ ಬಂಗಾರ ಸರವನ್ನು ವಶಕ್ಕೆ ಪಡೆಯಲಾಗಿದೆ.






