ಜನಮನ
ಲಡಾಕ್ ನಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದು 9 ಮಂದಿ ಸಾವು

Views: 0
ಸೇನಾಧಿಕಾರಿ ಮತ್ತು 8 ಮಂದಿ ಜವಾನರು ಯೋಧರು ಸಂಚರಿಸುತ್ತಿದ್ದ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದು 9 ಮಂದಿ ಸಾವನ್ನಪ್ಪಿದ್ದಾರೆ.
ಲೇಹ್ ನಿಂದ 150 ಕಿಲೋಮೀಟರ್ ದೂರದಲ್ಲಿರುವ ಕಿರಿಯಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಲೇಹ್ ನಲ್ಲಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಿಡಿ ನಿತ್ಯಾ ತಿಳಿಸಿದ್ದಾರೆ.
ಓರ್ವ ಜವಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯಲಾಗಿದೆ.
ಟ್ರಕ್ ನಲ್ಲಿ ಹತ್ತು ಸೈನಿಕರು ಪ್ರಯಾಣಿಸಿದರು ಮತ್ತು ಬೆಂಗಾವಳಗಿ ಐದು ವಾಹನಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






