ಜನಮನ

ಚಿತ್ರದುರ್ಗ: ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಜೆಟ್ ವಿಮಾನ ಪತನ   

Views: 0

ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್ ಮಾದರಿ ಜೆಟ್ ವಿಮಾನವೊಂದು ಚಿತ್ರದುರ್ಗದ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಧರೆಗುರುಳಿದು ಪತನಗೊಂಡಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಸಿದ್ದಪಡಿಸಿದ್ದ ಯುದ್ಧ ವಿಮಾನ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು. ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನಗೊಂಡಿದ್ದು ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.

ಡ್ರೋನ್ ಮಾದರಿಯ ಜೆಟ್ ವಿಮಾನ ಪತನವಾದ ಸ್ಥಳದಲ್ಲಿ ಜನರು ಕುತೂಹಲದಿಂದ ವೀಕ್ಷಿಸಲು ಜಮಾಹಿಸಿದ್ದಾರೆ. ವಿಮಾನದ ಪಳಯುಳಿಕೆಗಳು ಅಲ್ಲಲ್ಲಿ ಬಿದ್ದಿದ್ದು, ಪೊಲೀಸರು ಹಾಗೂ ವಾಯುಪಡೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

Related Articles

Back to top button
error: Content is protected !!