ಜನಮನ

ರಾಜ್ಯಾದ್ಯಂತ ವಿದ್ಯುತ್ ‘ ಪ್ರೀ ಪೈಡ್ ಸ್ಮಾರ್ಟ್ ಮೀಟರ್’

Views: 0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ರಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಿದ ಬೆನ್ನೆಲ್ಲೇ ಕರ್ನಾಟಕ ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ರಾಜ್ಯಾದ್ಯಂತ ಎಲ್ಲಾ ವರ್ಗದ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಕರಡು ಕಾನೂನು ರೂಪಿಸಿ ಅಧಿಸೂಚನೆ ಹೊರಡಿಸಿದೆ.

ಎಲೆಕ್ಟ್ರಿಕ್ ಮೀಟರ್ ಗಳು ಮೊಬೈಲ್ ಗಳಿಗೆ ಪ್ರೀ ಪೈಡ್ ಯೋಜನೆ ಕೆಲಸ ಮಾಡಲಿದೆ. ಈ ಸ್ಮಾರ್ಟ್ ಮೀಟರ್ ಗಳನ್ನು ಸ್ಮಾರ್ಟ್ ಫೋನ್ ಗಳಿಗೆ ಲಿಂಕ್ ಮಾಡಿ ಪ್ರತಿ ತಿಂಗಳು ವಿದ್ಯುತ್ ಕೋಟಾ ಖಾಲಿಯಾದಾಗ ಗ್ರಾಹಕರಿಗೆ ಸಂದೇಶ ರವಾನೆಯಾಗಲಿದೆ. ವಿದ್ಯುತ್ ಬಳಕೆಗಾಗಿ ರಿಚಾರ್ಜ್ ಸಹ ಮಾಡಬಹುದಾಗಿದೆ ಎಂದು ಆಯೋಗ ತಿಳಿಸಿದೆ.

ಆಯೋಗದ ಈ ನಿಯಮ ಎಸ್ಕಾಂ ಗಳಿಗೆ ವಾರ್ಷಿಕ ಭದ್ರತಾ ಠೇವಣಿ ಪಾವತಿಗೆ ಹೆಚ್ಚಿನ ಉಳಿತಾಯಕ್ಕೆ ಸಹಾಯವಾಗಲಿದೆ. ಇದರೊಂದಿಗೆ ಬಿಲ್ಲಿಂಗ್ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ತಿದ್ದುವ ಪ್ರಯತ್ನಗಳನ್ನು ತಡೆಯಲಿದೆ ಎಂದು ಹೇಳಿದೆ.

ಆಯೋಗವು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಆಯೋಗದ ಈ ಕ್ರಮದಿಂದ ತಿಂಗಳ ವಿದ್ಯುತ್ ಬಳಕೆಯು ಪರಿಣಾಮಕಾರಿ ನಿರ್ವಹಣೆಗೆ ಅನುಕೂಲವಾಗಲಿದೆ. ಸದ್ಯ ಆಯೋಗ ತಾತ್ಕಾಲಿಕ ಅಳವಡಿಕೆಯಲ್ಲಿ ಅಳವಡಿಸಲು ಆದೇಶಿಸಿದೆ.

ಉಚಿತ ವಿದ್ಯುತ್ ಇದ್ದಾಗ ಪ್ರೀ ಪೈಡ್ ಅಗತ್ಯವಿದೆಯೇ?

ಸರಕಾರ ಗ್ರಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಹೀಗಿರುವಾಗ ಗ್ರಹಬಳಕೆ ವಿದ್ಯುತ್ ಮೀಟರ್ ಅಗತ್ಯವಿದೆಯೇ ಎಂಬ ಪ್ರಶ್ನೆ ವ್ಯಾಪಕವಾಗಿ ಬಂದಿದೆ.

Related Articles

Back to top button
error: Content is protected !!