ಮಾಹಿತಿ ತಂತ್ರಜ್ಞಾನ
ಕುಂದಾಪುರ: ಬ್ಯಾಂಕ್ ಉದ್ಯೋಗಿಗೆ ₹1.64 ಲಕ್ಷ ಸೈಬರ್ ವಂಚನೆ
Views: 58
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಸಾರಿಕಾ ಪಿ.ವಿ. (33) ಎಂಬವರು ಅಕ್ಟೋಬರ್ 7, 2026 ರಂದು ಸಂಜೆ 7:30 ರ ಸುಮಾರಿಗೆ ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹೊರಡುವಾಗ ತಮ್ಮ ಮೊಬೈಲ್ ಇನ್ ಬಾಕ್ಸ್ ಪರಿಶೀಲಿಸಿದ್ದಾರೆ. ಈ ವೇಳೆ ಅವರ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 5 ಕಂತುಗಳಲ್ಲಿ ತಲಾ ₹32,933.22 ರಂತೆ ಬರೋಬ್ಬರಿ ₹1,64,666.10 ಹಣ ಕಟ್ ಆಗಿರುವುದು ಕಂಡುಬಂದಿದೆ.
ಯಾವುದೇ ರೀತಿಯ ಒಟಿಪಿ (OTP) ಆಗಲಿ ಅಥವಾ ಕಾರ್ಡ್ ವೆರಿಫಿಕೇಶನ್ ಕೋಡ್ ಆಗಲಿ ಬರದಿದ್ದರೂ, ಯಾರೋ ಸೈಬರ್ ಅಪರಾಧಿಗಳು ಕಾರ್ಡ್ ನಂಬರ್ ಬಳಸಿ ಅಕ್ರಮವಾಗಿ ಹಣ ಕಸಿದುಕೊಂಡಿದ್ದಾರೆ.
ಸಾರಿಕಾ ಅವರು ನೀಡಿದ ದೂರಿನನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2026, ಐಟಿ ಕಾಯ್ದೆ ಕಲಂ 66(C), 66(D) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಮ್ ತನಿಖೆ ಕೈಗೆತ್ತಿಕೊಂಡಿದ್ದಾರೆ.






