ಧಾರ್ಮಿಕ

ಬಾರಕೂರು ಮೂಲ ಕ್ಷೇತ್ರ: ಪಂಚಾಯತ್ ನೂತನ ಅಧ್ಯಕ್ಷರು, ಮಾಜಿ ಸದಸ್ಯರಿಗೆ ಸನ್ಮಾನ

Views: 1

ಕರಾವಳಿ ಕರ್ನಾಟಕ ಪದ್ಮಶಾಲಿ/ ಶೆಟ್ಟಿಗಾರರ ಮೂಲ ಕ್ಷೇತ್ರ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅಸೋಡು, ಕಾಳಾವರ, ವಕ್ವಾಡಿ ವ್ಯಾಪ್ತಿಗೆ ಸೇರಿದ ಕಾಳಾವರ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಶೆಟ್ಟಿಗಾರ್ ಹಾಗೂ ನೂರಕ್ಕೂ ಹೆಚ್ಚು ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದ ಆಪತ್ಕಾಲದ ಸಮಾಜಸೇವಕ, ಪಂಚಾಯತ್ ಮಾಜಿ ಸದಸ್ಯ ಭಾಸ್ಕರ್ ಶೆಟ್ಟಿಗಾರ್ ವಕ್ವಾಡಿ ಇವರನ್ನು ವಕ್ವಾಡಿ ಮಾಗಣೆ ವತಿಯಿಂದ ಸನ್ಮಾನ ನೀಡಲಾಯಿತು.

ದೇವಳದ ಆಡಳಿತ ಮೊಕ್ತೇಸರರಾದ ಡಾ.ಜಯರಾಮ್ ಶೆಟ್ಟಿಗಾರ್ ಅವರು ಮಾತನಾಡಿ, ಸಮರ್ಪಣಾ ಮನೋಭಾವದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಜನಸೇವೆಯಿಂದ ಇವರಿಂದ ಸಮಾಜವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹೇಳಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ ಅವರು ಮಾತನಾಡಿ, ಸಮಾಜಮುಖಿ ಸೇವಾ ಕಾರ್ಯಗಳು ಸದಾ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ದೇವಳದಲ್ಲಿ ನಡೆದ ಸತ್ಯನಾರಾಯಣ ಪೂಜಾ ಸೇವಾಕರ್ತರಾದ ಕುಂದಾಪುರ ಹಂಗಳೂರಿನ ರಕ್ಷಿತ್ ಎಂಟರ್ಪ್ರೈಸಸ್ ಮಾಲಕ ಹೂವಿನಕೆರೆ ರವೀಂದ್ರ ಶೆಟ್ಟಿಗಾರ್ ಅವರು ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾಲತಾ ವಿಠಲ ಶೆಟ್ಟಿಗಾರ್, ಅಭಿವೃದ್ಧಿ ಸಮಿತಿಯ ನಾರಾಯಣ ಶೆಟ್ಟಿಗಾರ ಸುರತ್ಕಲ್, ಶ್ರೀಮತಿ ಸಾವಿತ್ರಿ ನಾರಾಯಣಶೆಟ್ಟಿಗಾರ್, ರವೀಂದ್ರ ಶೆಟ್ಟಿಗಾರ್ ಹೂವಿನಕೆರೆ, ಚಂದ್ರಶೇಖರ್ ಶೆಟ್ಟಿಗಾರ ಬೆಂಗಳೂರು, ಗಣಪಯ್ಯಶೆಟ್ಟಿಗಾರ ಕಾಳಾವರ, ಜನಾರ್ದನ ಶೆಟ್ಟಿ ಗಾರ ವಕ್ವಾಡಿ, ಶ್ರೀಮತಿ ವಿಮಲ ಶೆಟ್ಟಿಗಾರ ಹೂವಿನಕೆರೆ, ರಾಮ ಶೆಟ್ಟಿಗಾರ ಹೂವಿನಕೆರೆ, ನಾಗರಾಜ್ ಶೆಟ್ಟಿಗಾರ ಹೂವಿನಕೆರೆ,

ಸಹ ಮೊಕ್ತೇಸರರಾದ ರಾಮ ಶೆಟ್ಟಿಗಾರ್ ಕೊಡ್ಲಾಡಿ, ಸುಧಾಕರ ವಕ್ವಾಡಿ,ಸುರೇಶ್ ಶೆಟ್ಟಿಗಾರ್ ಹೆಂಗವಳ್ಳಿ, ಚಂದ್ರಶೇಖರ್ ಶೆಟ್ಟಿಗಾರ ಕುಂದಾಪುರ, ರಘುರಾಮ್ ಶೆಟ್ಟಿಗಾರ ಬಾರ್ಕೂರು, ವಿನಯ್ ಕುಮಾರ್ ಸಿ ಕೆ,ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ,

ಟ್ರಸ್ಟಿಗಳಾದ ಶ್ರೀ ವಿಠ್ಠಲ್ ಶೆಟ್ಟಿಗಾರ್ ಕೆಳಾರ್ಕಳ ಬೆಟ್ಟು, ಶ್ರೀಮತಿ ಕವಿತಾ ಜಯರಾಮ ಶೆಟ್ಟಿಗಾರ್ ಸಂತೆಕಟ್ಟೆ, ರಘುರಾಮ್ ಶೆಟ್ಟಿಗಾರ್ ಚೇರ್ಕಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button
error: Content is protected !!