ಇತರೆ

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ:ನನ್ನ ಮಂಪರು ಪರೀಕ್ಷೆ ಅಲ್ಲ ಬೇರೆಯವರ ಮಂಪರು ಪರೀಕ್ಷೆ ಆಗಲಿ, ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ

Views: 35

ಕನ್ನಡ ಕರಾವಳಿ ಸುದ್ದಿ: ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಮಗೆ ನೋಟಿಸ್ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದೇ ಎಂದು ಗರಂ ಆದರು.

ಮಂಗಳೂರಿನಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಭರತ್ ಕುಮ್ದೇಲ್ಗೆ ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು?, ಅಧಿಕಾರಿಗಳ ತಲೆಯಲ್ಲಿ ಏನಿದೆ? ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ. ಆಮೇಲೆ ಬೇರೆಯವರ ಮಂಪರು ಪರೀಕ್ಷೆ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯೋದಾ? ನಾನು ಜೈಲಿಗೆ ಹೋಗಿಯಾಗಿದೆ, ನನ್ನದು ಸಾಲದು ಅಂತಾ ನನ್ನ ಹೆಂಡತಿಯನ್ನು ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ರೂ ಇದ್ರೆ ಗಲ್ಲಿಗೆ ಹಾಕಬೇಕು. ಅಷ್ಟು ಮಾತ್ರ ಬಾಕಿ ಇರೋದು. ತಾಕತ್ ಇದ್ರೆ ನನ್ನನ್ನ ಗಲ್ಲಿಗೆ ಹಾಕಲಿ ಎಂದು ಗುಡುಗಿದರು.

ನನ್ನ ಮೇಲೂ ಗೂಂಡಾ ಕಾಯ್ದೆ ಹಾಕುವ ಯೋಚನೆಯೂ ಇರಬಹುದು. ಹಾಗಾಗಿ ವಿಚಾರಣೆ ಎಂದು ನೋಟಿಸ್ ಕೊಟ್ಟಿರಬಹುದು. ದೇಶ ವಿರೋಧಿ, ಸಮಾಜ ವಿರೋಧಿ ಕೆಲಸದಲ್ಲಿದ್ರೆ ಕೇಸ್ ಹಾಕಬೇಕು. ಪೊಲೀಸರು ಜನ ಸ್ನೇಹಿಯಾಗಬೇಕು. ಕೋರ್ಟ್ ನಲ್ಲಿ ಪೊಲೀಸರಿಗೆ ಜಡ್ಜ್ ತಪರಾಕಿ ಹಾಕಿದ್ದಾರೆ ಎಂದು ತಿಳಿಸಿದರು.

 

Related Articles

Back to top button
error: Content is protected !!