ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘ: “ಪದ್ಮಕಲಾ ತಪಸ್ವಿ” ಪುರಸ್ಕಾರಕ್ಕೆ ದಿನೇಶ್ ಶೆಟ್ಟಿಗಾರ್ ಕೋಡಪದವು, ರೂಪಶ್ರೀ ವರ್ಕಾಡಿ ಆಯ್ಕೆ
Views: 147
ಕನ್ನಡ ಕರಾವಳಿ ಸುದ್ದಿ,:ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘ (ರಿ.) ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿ (ರಿ.) ಮಹಿಳಾ ಬಳಗ ಇವರಿಂದ ಕೊಡಲ್ಪಡುವ “ಪದ್ಮಕಲಾ ತಪಸ್ವಿ” ಪುರಸ್ಕಾರಕ್ಕೆ ದಿನೇಶ್ ಶೆಟ್ಟಿಗಾರ್ ಕೋಡಪದವು, ರೂಪಶ್ರೀ ವರ್ಕಾಡಿ ಇವರನ್ನು ಆಯ್ಕೆಮಾಡಲಾಗಿದೆ.
ಸಂಘದ 90ನೆಯ ವಾರ್ಷಿಕ ಮಹಾಸಭೆ, ಸೊಸೈಟಿ 51ನೆಯ ವಾರ್ಷಿಕ ಮಹಾಸಭೆ ಮತ್ತು ಮಹಿಳಾ ಬಳಗದ 38ನೆಯ ವಾರ್ಷಿಕ ಮಹಾಸಭೆಯು 27.09.2026 ನೇ ರವಿವಾರ ಬೆಳಿಗ್ಗೆ ಘಂಟೆ 8.30ಕ್ಕೆ ಮಹಾರಾಷ್ಟ್ರ ಸೇವಾ ಸಂಘ ಹಾಲ್, ಅಪ್ಪಾ ಬಜಾರ್‌ನ ಮೇಲೆ, ಇಂದಿರಾ ನಗರ, ಮುಲುಂಡ್ ಪಶ್ಚಿಮ, ಮುಂಬಯಿ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಎಮ್. ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸೊಸೈಟಿ ಸಭಾಪತಿಯವರಾದ ಶ್ರೀ ಶಿವಾನಂದ ಆರ್. ಶೆಟ್ಟಿಗಾರ್ ಇವರ ಸಭಾಪತಿತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮಕಲಾ ತಪಸ್ವಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ದಿನೇಶ್ ಶೆಟ್ಟಿಗಾರ್ ಕೋಡಪದವು

ತೆಂಕು ತಿಟ್ಟಿನ ಹೆಸರಾಂತ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಹಲವಾರು ವರ್ಷಗಳಿಂದ ತೆಂಕುತಿಟ್ಟಿನ ಯಕ್ಷರಂಗದಲ್ಲಿ ಹಾಸ್ಯ ಕಲಾವಿದರಾಗಿ ಮಿಂಚುತ್ತಿರುವ ದಿನೇಶ್ ಶೆಟ್ಟಿಗಾರ್ ಕೊಡಪದವು ಇವರ ಯಕ್ಷಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ರೂಪಶ್ರೀ ವರ್ಕಾಡಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಸುಮಂತ್ ಭಟ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ 3 ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ, ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದು, ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲ ನಟಿ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಶಿವಧ್ವಜ್ ಶೆಟ್ಟಿ ನಿರ್ದೇಶನದ ಇಂಬು’ ತುಳು ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಜೊತೆಗೆ ನಟ,ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲ ನಟ, ಜೊತೆಗೆ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿವೆ.
ಮೂಲತಃ ರಂಗಭೂಮಿ ಹಿನ್ನಲೆಯುಳ್ಳ ರೂಪಶ್ರೀ ವರ್ಕಾಡಿ ರಕ್ಷಿತ್ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಲಭಿಸಿದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೂಪಶ್ರೀ ವರ್ಕಾಡಿ ಈ ಚಿತ್ರದ ಮೂಲಕ ರಾಷ್ಟ್ರ ಮಟ್ಟದ ಗಮನ ಸೆಳೆದಿದ್ದಾರೆ.
ಕೇಶವ್ ವಿ. ಶೆಟ್ಟಿಗಾರ್ ಗೌರವ ಕಾರ್ಯದರ್ಶಿ,ಪದ್ಮಶಾಲಿ ಸಮಾಜ ಸೇವಾ ಸಂಘ, ತಾರ ಯು. ಶೆಟ್ಟಿಗಾರ್ ಕಾರ್ಯದರ್ಶಿ, ಮಹಿಳಾ ಬಳಗ, ರಮೇಶ ಪಿ. ಶೆಟ್ಟಿಗಾರ್ ಗೌರವ ಕಾರ್ಯದರ್ಶಿ ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿ ಅಭಿಲಾಶ್ ಎಲ್. ಶೆಟ್ಟಿಗಾರ್,ಕಾರ್ಯದರ್ಶಿ, ಯುವ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






