ಕರಾವಳಿ ಪದ್ಮಶಾಲಿಗರ ಮೂಲಕ್ಷೇತ್ರ ಬಾರ್ಕೂರಿನಲ್ಲಿ” ಶ್ರೀ ವೀರಭದ್ರ ಜಯಂತಿ”ಆಚರಣೆ
Views: 105
ಕನ್ನಡ ಕರಾವಳಿ ಸುದ್ದಿ: ಕರಾವಳಿ ಶೆಟ್ಟಿಗಾರ್/ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾದ್ರಪದ ಮಾಸದ ಪ್ರಥಮ ಮಂಗಳವಾರ ಸೆ.15ರಂದು ಶ್ರೀ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಶ್ರದ್ಧಾ- ಭಕ್ತಿಯಿಂದ ಶ್ರೀವೀರಭದ್ರ ಜಯಂತಿ ಆಚರಿಸಲಾಯಿತು.

ಬೆಳಿಗ್ಗೆ ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಭಜನೆ, ಹೂವಿನ ಪೂಜೆ ಮಧ್ಯಾಹ್ನ ಮಹಾಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಸಹ ಮೊಕ್ತೇಸರರು ,ಗುರಿಕಾರರು ಅಭಿವೃದ್ಧಿ ಸಮಿತಿ, ಸಂಘಟನಾ ಸಮಿತಿ, ಯುವ ವೇದಿಕೆ, ವೀರೇಶ್ವರ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಶ್ರೀ ಬ್ರಹ್ಮಲಿಂಗ ವೀರಭದ್ರ ಪದ್ಮಶಾಲಿ ಶೆಟ್ಟಿಗಾರ್ ಸಮಾಜ ಸೇವಾ ಟ್ರಸ್ಟ್ ವಿವಿಧ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು
ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆಯಲ್ಲಿ ಪುರುಷೋತ್ತಮ್ ಶೆಟ್ಟಿಗಾರ್, ಡಾ ಶಿವಪ್ರಸಾದ್ ಶೆಟ್ಟಿಗಾರ್, ಜನಾರ್ಧನ್ ಶೆಟ್ಟಿಗಾರ್, ಸುರೇಂದ್ರ ಶೆಟ್ಟಿಗಾರ್, ಜನಾರ್ಧನ್ ಶೆಟ್ಟಿಗಾರ್ ವಕ್ವಾಡಿ, ಶ್ರೀಮತಿ ಅಂಜನ ಮತ್ತು ವಿನಯ್ ಸಿ ಕೆ, ಶ್ರೀಮತಿ ಹರಿಣಿ ಮತ್ತು ಸುರೇಶ್ ಶೆಟ್ಟಿಗಾರ್ ಕಾರ್ಕಡ, ಶ್ರೀಮತಿ ಇಂದಿರಾ ಸುಕುಮಾರ್ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

ವೀರಭದ್ರ ಜಯಂತಿ ಮಹತ್ವ: ಶಿವನ ಉಗ್ರ ಅವತಾರವಾದ ವೀರಭದ್ರ ದೇವರ ಜನನವನ್ನು ಈ ದಿನ ಸ್ಮರಿಸಲಾಗುತ್ತದೆ. ದುಷ್ಟ ಸಂಹಾರ ಹಾಗೂ ಧರ್ಮ ರಕ್ಷಣೆಯ ಸಂಕೇತವಾಗಿ ಭಕ್ತರು ಈ ಹಬ್ಬವನ್ನು ಆಚರಿಸುತ್ತಾರೆ.ಭಾರತವು ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಶ್ರೀ ವೀರಭದ್ರ ದೇವರ ಭಕ್ತಗಣ ನೆಲೆಸಿರುತ್ತಾರೆ. ಜೊತೆಗೆ ಸಾವಿರಾರು ವೀರಭದ್ರ ದೇವರ ದೇವಾಲಯಗಳಿವೆ






