ಜನಮನ
ಬೈಕ್ ಗಳ ನಡುವೆ ಡಿಕ್ಕಿ: ಉಪನ್ಯಾಸಕ, ಶಿಕ್ಷಕಿ ಸಾವು

Views: 0
ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸರಕಾರಿ ಕಾಲೇಜು ಉಪನ್ಯಾಸಕ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಸಂದ್ರದ ನಿವಾಸಿ ನರಸಪ್ಪ( 51) ಮತ್ತು ಉಳ್ಳಾಲದ ನಿವಾಸಿ ರಕ್ಷಾ( 21) ಮೃತರು.
ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಚಂದನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಗೆಳೆಯನ ಜೊತೆ ರಾತ್ರಿ 11:30ರ ಸುಮಾರಿಗೆ ರಕ್ಷಾ ಮನೆಗೆ ತೆರುತಿದ್ದರು. ಅದೇ ಹೊತ್ತಿನಲ್ಲಿ ನರಸಪ್ಪ ಅವರು ಕೂಡ ಮನೆಗೆ ಹೊರಟಿದ್ದರು. ಈ ವೇಳೆ ಉಲ್ಲಾಳದ ಮಾರುತಿ ನಗರ ಮುಖ್ಯ ರಸ್ತೆಯ ಕೆಎಲ್ಇ ಕಾಲೇಜ್ ಸಮೀಪ ನರಸಪ್ಪ ಅವರ ಬೈಕ್ ಗೆ ಚಂದನ್ ಅವರ ಬೈಕ್ ಡಿಕ್ಕಿ ಹೊಡಿದಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಕ್ಷಾ ಮತ್ತು ನರಸಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.






