ಜನಮನ
ಕರ್ನಾಟಕ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ :ವಿವರ ಇಲ್ಲಿದೆ

Views: 1
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ,ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು,ಧಾರವಾಡ, ಹಾಗೂ ಬೀದರ್ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದಲ್ಲಿ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ತಹಶೀಲ್ದಾರ್ ಶಿವರಾಜು, ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಿಪತಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ತುಮಕೂರು ನಾಗರಾಜ್, ಚಿಕ್ಕಬಳ್ಳಾಪುರ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಿಪತಿ ಅವರಿಗೆ ಸೇರಿದ ತೋಟದ ಮನೆಯ ಮೇಲೆ ದಾಳಿ, ಕೊಡುಗು ಜಿಲ್ಲೆಯ ಜಿಲ್ಲಾಧಿಕಾರಿ ನಂಜುಂಡೇ ಗೌಡ, ಇಂಜಿನಿಯರ್ ರಘುಪತಿ ನಿವಾಸದ ಮೇಲೆ ದಾಳಿ, ಧಾರವಾಡದ ಕಂದಾಯ ನಿರೀಕ್ಷಕ ನಟರಾಜ್, ಠಾಣೆಯ ವಿಜಯಕುಮಾರ್, ದಾವಣಗೆರೆಯ ಸಣ್ಣ ನೀರಾವರಿ ಇಲಾಖೆ ಕೆ.ಮಹೇಶ್, ಕೊಪ್ಪಳ ಮಂಜುನಾಥ, ಬನ್ನಿಕೊಪ್ಪ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.






