ಧಾರ್ಮಿಕ
ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಉತ್ಸವ ಸಂಪನ್ನ

Views: 1
ಬೈಂದೂರು ಕ್ಷೇತ್ರ ವ್ಯಾಪ್ತಿಯ ಪುರಾಣ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ,ಪೂಜಾ ಕೈಂಕರ್ಯಗಳೊಂದಿಗೆ ಜಾತ್ರೆ ಸಂಪನ್ನಗೊಂಡಿತು.

ರಾಷ್ಟ್ರೀಯ ಹೆದ್ದಾರಿಯ ಸಮುದ್ರ ಕಿನಾರದ ಪಕ್ಕದಲ್ಲಿ ಸೌರ್ಪಣಿಕ ನದಿ ತಟದಲ್ಲಿ ನೆಲೆ ನಿಂತಿರುವ ಈ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಬೆಳಿಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿ ಸಮುದ್ರ ಮತ್ತು ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ದೇವರಿಗೆ ವಿವಿಧ ಹರಕೆಗಳನ್ನು ಭಕ್ತರು ಸಲ್ಲಿಸಿದರು.

ಭೂಮಾತೆಯನ್ನು ದುಷ್ಟ ರಕ್ಕಸರಿಂದ ರಕ್ಷಿಸಿದ ಶ್ರೀ ವರಾಹ ಸ್ವಾಮಿಯು ಲೋಕಕ್ಕೆ ಕಲ್ಯಾಣ ಉಂಟು ಮಾಡಲಿ, ಸಕಲ ಜೀವರಾಶಿಗಳನ್ನು ಕಾಯುವಂತಾಗಲಿ, ಮೀನುಗಾರರ ಸಕಲ ಅಭಿವೃದ್ಧಿಯನ್ನು ನೀಡಲಿ ಎಂಬುದಾಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನವ ವಿವಾಹಿತ ಜೋಡಿಗಳು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.






