ಇತರೆ

ಕುಂದಾಪುರ: ಬಸ್ರೂರು ಮೂರ್ಕೈಯಲ್ಲಿ ಅಂಗಡಿ ಮಾಡಿನ ಸೀಟು ಒಡೆದು ಒಳನುಗ್ಗಿ ನಗದು ಕಳ್ಳತನ

Views: 77

ಕುಂದಾಪುರ: ಹಾಲಿನ ಅಂಗಡಿಯ ಮಾಡಿನ ತಗಡು ಒಡೆದು ಒಳನುಗ್ಗಿದ ಕಳ್ಳರು 1.10 ಲಕ್ಷ ರೂ. ನಗದು ಕಳವು ಮಾಡಿದ ಘಟನೆ ವಡೇರಹೋಬಳಿ ಗ್ರಾಮದ ಬಸ್ರೂರು ಮೂರ್ಕೈಯಲ್ಲಿ  ಸಂಭವಿಸಿದೆ.

ದೂರುದಾರ ವಡೇರಹೋಬಳಿ ನಿವಾಸಿ ಹಾಗೂ ಅಂಗಡಿ ಮಾಲಕ ಸುರೇಂದ್ರ ಅವರು ಸೆ. 6ರ ರಾತ್ರಿ 10.30ರ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಸೆ. 7ರ ಬೆಳಗ್ಗೆ 6 ಗಂಟೆಗೆ ಅಂಗಡಿ ತೆರೆಯಲು ಬಂದಾಗ, ಅಂಗಡಿಯ ಮಾಡಿನ ತಗಡು ಒಡೆದಿರುವುದು ಹಾಗೂ ಕ್ಯಾಶ್ ಡ್ರಾವರ್‌ನಲ್ಲಿದ್ದ ನಗದು ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!