ಕುಂದಾಪುರ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘ: ಶಿಕ್ಷಕ ದಿನಾಚರಣೆ, ಹಿರಿಯ ನಿವೃತ್ತ ಶಿಕ್ಷಕರಿಗೆ ಸನ್ಮಾನ
Views: 0
ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ಸೆ.5ರಂದು ಕುಂದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಸಂಘದ ಸಭೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಸದಸ್ಯರಾದ ನಾಲ್ಕು ಜನ ಹಿರಿಯ ನಿವೃತ್ತ ಶಿಕ್ಷಕರಾದ 85 ವಯಸ್ಸಿನ ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ವೆಂಕಟರಮಣ ಐತಾಳ್ ಕೋಟೇಶ್ವರ, 81 ವಯಸ್ಸಿನ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ವಕ್ವಾಡಿ ಮಹಾಬಲ ಶೆಟ್ಟಿಗಾರ್, 91 ವಯಸ್ಸಿನ ನಿವೃತ್ತ ಪ್ರೌಢಶಾಲಾ ಶಿಕ್ಷಕ ಗಣಪಯ್ಯ ಜಿ. ಕುಂದಾಪುರ, 81 ವಯಸ್ಸಿನ ಶ್ರೀ ಶೀನ ಶೆಟ್ಟಿಗಾರ್ ವಕ್ವಾಡಿ ಇವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ಎ. ದಿನಕರ ಶೆಟ್ಟಿ ಬಸ್ರೂರು, ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷ ತಗ್ಗರ್ಸೆ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯತ್ವ ಸ್ವೀಕರಿಸಿದ ಮಂಜುನಾಥ್ ಕುಂದಾಪುರ ಇವರನ್ನು ಸನ್ಮಾನಿಸಿ ಬರಮಾಡಿಕೊಳ್ಳಲಾಯಿತು.
ಗೌರವಾಧ್ಯಕ್ಷ ವಕ್ವಾಡಿ ಭಾಸ್ಕರ್ ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸೂರ್ಯಕಾಂತಿ, ಸಂಜೀವ ಮರಕಾಲ, ಸಾವಿತ್ರಿ ಕೆ.,ವಿ ಮಂಜು ಪೂಜಾರಿ, ಎ. ಸುರೇಂದ್ರ ಶೆಟ್ಟಿ, ಜಯಲಕ್ಷ್ಮಿ ಕೊತ್ವಾಲ್, ಶೋಭಾ ನಾಡಕರ್ಣಿ, ಬಾಬು ಪೂಜಾರಿ ಉಪಸ್ಥಿತರಿದ್ದರು.
ಯಶೋಧಾ ಶೆಟ್ಟಿ, ವಿನಯ ಶೆಣೈ, ಸರೋಜಿನಿ ಕೆ. ಸನ್ಮಾನ ಪತ್ರ ವಾಚಿಸಿದರು. ರಾಮಚಂದ್ರ ಉಪಾಧ್ಯಾಯ ಪ್ರಾರ್ಥಿಸಿದರು. ಕಾರ್ಯದರ್ಶಿ ರಘುವೀರ ಕೆ. ವರದಿ ವಾಚಿಸಿದರು. ಖಜಾಂಚಿ ಸುಬ್ರಾಯ ಗಾಣಿಗ ಲೆಕ್ಕಪತ್ರ ಮಂಡಿಸಿದರು. ಶಂಕರ ಬಿಲ್ಲವ ಕಟ್ ಬೆಲ್ತೂರು ಸನ್ಮಾನ ಗೀತೆ ಹಾಡಿದರು.






