ಸೆ.10ಕ್ಕೆ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಬಾಂಧವರಿಂದ ಶೃಂಗೇರಿ ಶ್ರೀ ಜಗದ್ಗುರು ದರ್ಶನ- ಅಭಿವಂದನ ಕಾರ್ಯಕ್ರಮ

Views: 89
ಸೆಪ್ಟೆಂಬರ್ 10ಕ್ಕೆ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಬಾಂಧವರು ಒಂದಾಗಿ ಶೃಂಗೇರಿ ಜಗದ್ಗುರು ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳನ್ನು ಭೇಟಿ ಮಾಡಿ, ಅವರ ದರ್ಶನ ಪಡೆದು, ಯಥಾ ಶಕ್ತಿ ಸೇವೆಗಳನ್ನು ಸಲ್ಲಿಸಿ, ಆಶೀರ್ವಾದ ಅನುಗ್ರಹಗಳಿಗೆ ಪಾತ್ರರಾಗಿ, ಇದೇ ಬರುವ ನಿಜ ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕ 10.09.2023ರ ರವಿವಾರದಂದು ಶ್ರೀಗಳು ಆದೇಶ ನೀಡಿದ ಹಿನ್ನೆಲೆಯಲ್ಲಿ ಪದ್ಮಶಾಲಿ /ಶೆಟ್ಟಿಗಾರ ಸಮಾಜ ಬಾಂಧವರು ಶ್ರೀ ಕ್ಷೇತ್ರಕ್ಕೆ ತೆರಳಿ ಶೃಂಗೇರಿ ಶ್ರೀ ಜಗದ್ಗುರು ದರ್ಶನ -ಅಭಿವಂದನಾ ಕಾರ್ಯಕ್ರಮ ನಡೆಯಲಿದೆ.

ಶ್ರೀ ಶಂಕರ ಭಗವತ್ಪಾದಾಚಾರ್ಯರು ಸನಾತನ ವೈದಿಕ ಧರ್ಮದ ಉದ್ಧಾರಕ್ಕಾಗಿ ಅವತರಿಸಿ, ಅಖಿಲ ಭಾರತದಲ್ಲಿ ಸಂಚರಿಸಿ ಪಂಡಿತರಲ್ಲಿ ಪಾಮರರಲ್ಲಿ ಕುರಿತಾಗಿ ಜಾಗೃತಿಯನ್ನು ಮೂಡಿಸಿದವರು.
ಧರ್ಮರಕ್ಷಣೆಗಾಗಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಹಾಗಾಗಿ ಸಮಸ್ತ ಹಿಂದೂ ಸಮಾಜವು ಅವರನ್ನು ಹಾಗೂ ಅವರ ಶಿಷ್ಯ ಪರಂಪರೆಯನ್ನು ಜಗದ್ಗುರು ಎಂಬುದಾಗಿ ಸ್ವೀಕರಿಸಿ ಗೌರವವನ್ನು ಸಲ್ಲಿಸುತ್ತಿದೆ. ಅದರಲ್ಲೂ ನಮ್ಮ ಪದ್ಮಶಾಲಿ/ ಶೆಟ್ಟಿಗಾರ ಸಮುದಾಯದವರು ವಿವಿಧ ಪ್ರದೇಶದಲ್ಲಿ ವ್ಯಾಪಿಸಿದ್ದು, ತಮ್ಮದೇ ಆದ 16 ದೇವಸ್ಥಾನಗಳನ್ನ ಹೊಂದಿ ಆರಾಧಿಸುತ್ತಿದ್ದಾರೆ.
ಆರ್ಥಿಕ ,ಸಾಮಾಜಿಕ ಅಭಿವೃದ್ಧಿಗಾಗಿ ಸುಯೋಗ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡಿರುವುದು ತಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಅಲ್ಲದೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಮಹಾ ಸನ್ನಿಧಾನದಲ್ಲಿ ಅಪರಿಮಿತವಾದ ಭಕ್ತಿ, ಶ್ರದ್ಧೆಗಳನ್ನು ತೋರ್ಪಡಿಸಿಸುತ್ತಾ ಇರುವುದು ನಾವು ಹೆಮ್ಮೆ ಪಡಬೇಕಾದ ವಿಚಾರ.

ಪ್ರತಿ ವರ್ಷ ಆಷಾಢ ಪೂರ್ಣಿಮೆ ಎಂದು ಭಾದ್ರಪದ ಪೂರ್ಣಿಮೆಯವರೆಗೆ ಶ್ರೀ ಜಗದ್ಗುರುಗಳು ಚಾತುರ್ಮಾಸ ವ್ರತವನ್ನು ಸ್ವೀಕರಿಸಿದಾಗ ಶಿಷ್ಯರೆಲ್ಲ ಅವರ ದರ್ಶನ ಪಡೆದು ಯಥಾ ಶಕ್ತಿ ಸೇವೆ ಸಲ್ಲಿಸಿದರೆ ಇಡೀ ಸಮುದಾಯಕ್ಕೆ ಅನುಗ್ರಹ ಲಭಿಸುತ್ತದೆ ಎಂಬ ಅಭಿಪ್ರಾಯ ಪದ್ಮಶಾಲಿ/ ಶೆಟ್ಟಿಗಾರ ಸಮಾಜ ಬಾಂಧವರದು.
ಶ್ರೀ ಗುರುಗಳ ದರ್ಶನಕ್ಕೆ ಸೂಚನೆಗಳು
ದಿನಾಂಕ 10.09.2023 ರಂದು ಬೆಳಿಗ್ಗೆ 9.30 ಗಂಟೆಗೆ ಶೃಂಗೇರಿಯ ಗುರುಭವನದಲ್ಲಿ ಸಮಸ್ತ ಸಮಾಜ ಬಾಂಧವರು ಸೇರಬೇಕು.
ಪುರುಷರು ಅಂಗಿ, ಬನಿಯನ್ ತೆಗೆದಿಟ್ಟು ಪಂಚೆ, ಶಾಲು ಧರಿಸಬೇಕು. ಹಣೆಯಲ್ಲಿ ಗಂಧ ಕುಂಕುಮಗಳಿರಬೇಕು.
ಸ್ತ್ರೀಯರು ಸೀರೆ ಅಥವಾ ಶಾಲು ಸಹಿತ ಚೂಡಿದಾರ ಹಾಗೂ ಕುಂಕುಮ ಹೂಗಳನ್ನು ಮುಡಿಯಲ್ಲಿ ಧರಿಸಿರಬೇಕು.
ಶ್ರೀ ಗುರು ಸನ್ನಿಧಿಯಲ್ಲಿ ಪ್ರತ್ಯೇಕವಾಗಿ ಪಾದಪೂಜೆ, ಭಿಕ್ಷಾವಂದನೆ ಪಾದ ಕಾಣಿಕೆಗಳನ್ನು ಸಮರ್ಪಿಸಲು ಅವಕಾಶವಿದೆ. ಜೋಡು ತೆಂಗಿನಕಾಯಿ, ಫಲ ವಸ್ತುಗಳನ್ನು ತರಬೇಕು.
ಪ್ರತಿಯೊಂದು ದೇವಳದ ಪರವಾಗಿ ಪಾದಪೂಜೆ, ಭಿಕ್ಷಾವಂದನೆ, ಪಾದ ಕಾಣಿಕೆಗಳನ್ನು ಸಲ್ಲಿಸಬೇಕು.
ಅಕ್ಕಿ, ಬೇಳೆ,ಬೆಲ್ಲ, ತೆಂಗಿನಕಾಯಿ, ತರಕಾರಿ, ಹಣ್ಣುಗಳನ್ನು ಯಥಾ ಶಕ್ತಿ ಹೊರೆಕಾಣಿಕೆಯಾಗಿ ಅರ್ಪಿಸಬಹುದು.
ಶ್ರೀ ಗುರುಗಳಿಂದ ಫಲ, ಮಂತ್ರಾಕ್ಷತೆ ಪಡೆದ ಅನಂತರ ಗ್ರಹಿಣಿಯರಿಗೆ ಹಾಗೂ ವಯಸ್ಸಿಗೆ ಬಂದ ಕನ್ಯೆಯರಿಗೆ ಶ್ರೀ ಶಾರದಾಂಬ ಪ್ರಸಾದವಾಗಿ ಸೀರೆಗಳನ್ನು ವಿತರಿಸಲಾಗುತ್ತದೆ.
ಗುರುಭವನವನ್ನು ಸೇರಿದ ಮೇಲೆ ಎಲ್ಲರೂ ಮೌನವಾಗಿರಬೇಕು.
ಶ್ರೀ ಗುರುಗಳು ಸಮಾಜ ಬಂಧುಗಳನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ. ತದನಂತರ ಅನ್ನಪ್ರಸಾದವಿದೆ.
ಶ್ರೀ ಗುರು ಸನ್ನಿಧಿಯಲ್ಲಿ ಸೇವೆಗಳು,
ಪಾದಪೂಜಾ- ರೂ.1000, ಭಿಕ್ಷಾವಂದನೆ ರೂ. 500, ಶಾರದಾ ಸನ್ನಿಧಿಯಲ್ಲಿ ಕುಂಕುಮಾರ್ಚನೆ ರೂ. 150, ಸರ್ವಸೇವೆ ರೂ. 500.
ತಮ್ಮೆಲ್ಲರನ್ನು ಸ್ವಾಗತಿಸುವ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ(ರಿ),ಬೆಂಗಳೂರು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪದ್ಮಶಾಲಿ ಸಮಾಜ ಸೇವಾ ಸಂಘ (ರಿ)ಮುಂಬೈ.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ) ಉಡುಪಿ.
ಸಮಸ್ತ ಪದ್ಮಶಾಲಿ / ಶೆಟ್ಟಿಗಾರ ಸಮಾಜ ಬಾಂಧವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಶ್ರೀ ರಾಮದಾಸ ಶೆಟ್ಟಿಗಾರ ಪಣಿಯಾಡಿ-9880936364
ಶ್ರೀ ಲಕ್ಷ್ಮಣ ಕೊಡಿಯಾಲ್ ಬೈಲ್- 9686140470
ಶ್ರೀ ಭಗವಾನ್ ದಾಸ್ ಕಿನ್ನಿಮುಲ್ಕಿ- 9740096561
ಶ್ರೀ ಉತ್ತಮ್ ಶೆಟ್ಟಿಗಾರ್ ಮುಂಬೈ- 9820211903
ಶ್ರೀಮತಿ ಭಾನುಮತಿ ಡಿ ಬೆಂಗಳೂರು -9945403434
ಶ್ರೀ ಕೃಷ್ಣಾನಂದ ಶೆಟ್ಟಿಗಾರ ಮುಂಬೈ- 9892534765
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶೃಂಗೇರಿ ಶ್ರೀ ಜಗದ್ಗುರುಗಳ ಅಪಾರ ಅನುಗ್ರಹಕ್ಕೆ ಪಾತರಾಗಬೇಕಾಗಿ ಅಪೇಕ್ಷಿಸುವ -ಸಮಸ್ತ ಪದ್ಮಶಾಲಿ/ಶೆಟ್ಟಿಗಾರ ಬಾಂಧವರು.








