ಸಾಮಾಜಿಕ

ಕೋಟೇಶ್ವರ ವಲಯ ಪದ್ಮಶಾಲಿ ಸಂಘದ ನೂತನ ಅಧ್ಯಕ್ಷರಾಗಿ ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್ ಆಯ್ಕೆ 

Views: 0

ಕನ್ನಡ ಕರಾವಳಿ ಸುದ್ದಿ: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸಂಘಗಳ ಕಾರ್ಯಕರ್ತರಾಗಿದ್ದು ಸುಮಾರು 35 ವರ್ಷಗಳ ಹಿಂದೆ ಕೋಟೇಶ್ವರ ಪದ್ಮಶಾಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರನ್ನು ಕೋಟೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನವನ್ನು ಒಂದು ವರ್ಷದ ಒಳಗೆ ಲೋಕಾರ್ಪಣೆ ಮಾಡಬೇಕೆಂಬ ಇಚ್ಚೆಯಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಸವರಾಜ್ ಶೆಟ್ಟಿಗಾರ್‌ರವರು ಈಗಾಗಲೇ 22 ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದು ಸಂಸ್ಥೆಗಳು ಸುವರ್ಣ ಮಹೋತ್ಸವದ ಅಂಚಿನಲ್ಲಿ ಇದೆ ಎಂಬುದು ಗಮನಾರ್ಹ

ಗೌರವಾಧ್ಯಕ್ಷರಾಗಿ -ಕೆಳಾರ್ಕಳಬೆಟ್ಟು ಚಂದ್ರಶೇಖರ ವಿ.ಎಸ್ ಉಪಾಧ್ಯಕ್ಷರಾಗಿ ಎಸ್‌.ಮಂಜುನಾಥ ಶೆಟ್ಟಿಗಾರ್, ಗಣಪಯ್ಯ ಶೆಟ್ಟಿಗಾರ್ ಕಾಳಾವರ, ಸುರೇಖಾ ಶೆಟ್ಟಿಗಾ‌ರ್, ಸುಗುಣ ವಿ.ಶೆಟ್ಟಿಗಾರ್, ಪ್ರಾಧಾನ ಕಾರ್ಯದರ್ಶಿಯಾಗಿ ಬೆಳ್ಳನಕೆರೆ ಪ್ರಮೋದ್ ಶೆಟ್ಟಿಗಾ‌ರ್, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಂ. ಶೆಟ್ಟಿಗಾ‌ರ್, ಉಷಾ ರವೀಂದ್ರ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಸೌಜನ್ಯ ಎಂ. ಶೆಟ್ಟಿಗಾರ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೃಷ್ಣಮೂರ್ತಿ ಶೆಟ್ಟಿಗಾ‌ರ್, ಸಂಘಟನಾ ಕಾರ್ಯದರ್ಶಿಯಾಗಿ-ಕೆ.ಆರ್.ರಾಘವೇಂದ್ರ ಶೆಟ್ಟಿಗಾ‌ರ್, ಪಾಂಡುರಂಗ ಶೆಟ್ಟಿಗಾ‌ರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಾತ ಶೇಖರ ಶೆಟ್ಟಿಗಾ‌ರ್, ಕ್ರೀಡಾ ಕಾರ್ಯದರ್ಶಿಯಾಗಿ- ಅಶೋಕ್ ಜಿ.ಶೆಟ್ಟಿಗಾ‌ರ್, ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ವಕ್ವಾಡಿ ಜನಾರ್ಧನ್ ಶೆಟ್ಟಿಗಾರ್ ಕಾರ್ಯದರ್ಶಿಯಾಗಿ ಇಂಜಿನೀಯರ್ ಸುರೇಶ್ ಶೆಟ್ಟಿಗಾ‌ರ್, ಜತೆ ಕಾರ್ಯದರ್ಶಿಯಾಗಿ -ವೆಂಕಟೇಶ್ ಶೆಟ್ಟಿಗಾರ್, ಇಂದಿರಾ ಶೆಟ್ಟಿಗಾ‌ರ್, ಸಂಚಾಲಕರಾಗಿ -ಸುರೇಶ್ ಶೆಟ್ಟಿಗಾರ್ ಐತಾಳ್‌ಬೆಟ್ಟು, ರಾಘವೇಂದ್ರ ಶೆಟ್ಟಿಗಾ‌ರ್, ಮಂಜುನಾಥ ಶೆಟ್ಟಿಗಾರ್, ಮಹಿಳಾ ಸಂಚಾಲಕಿಯಾಗಿ- ಶ್ರೀಮತಿ ರಾಜೀವಿ ಲಕ್ಷ್ಮಣ ಶೆಟ್ಟಿಗಾ‌ರ್ ಹಾಗೂ ಕಾರ್ಯಕಾರಿ ಸಮಿತಿಗೆ 18 ಜನ ಆಯ್ಕೆಯಾದರು. ಆಯ್ಕೆಯ ಪಟ್ಟಿಯನ್ನು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಭಾಕರ ಶೆಟ್ಟಿಗಾ‌ರ್ ಮಂಡಿಸಿದರು.

Related Articles

Back to top button
error: Content is protected !!